ಇನ್ಫೋಸಿಸ್‌ನ ಮೈಸೂರು ಕ್ಯಾಂಪಸ್‌ನಲ್ಲಿ ಮತ್ತೆ 30-45 ಉದ್ಯೋಗಿಗಳ ಸಾಮೂಹಿಕ ವಜಾ ಪ್ರಕ್ರಿಯೆ

| N/A | Published : Mar 28 2025, 12:37 AM IST / Updated: Mar 28 2025, 03:09 AM IST

ಸಾರಾಂಶ

ಎರಡು ತಿಂಗಳ ಹಿಂದೆ ನೂರಾರು ಟ್ರೈನಿ ಉದ್ಯೋಗಿಗಳನ್ನು ವಜಾಗೊಳಿಸಿ ಸುದ್ದಿಯಾಗಿದ್ದ ಇನ್ಫೋಸಿಸ್‌ನ ಮೈಸೂರು ಕ್ಯಾಂಪಸ್‌ನಲ್ಲಿ ಮತ್ತೆ 30-45 ಉದ್ಯೋಗಿಗಳ ಸಾಮೂಹಿಕ ವಜಾ ಪ್ರಕ್ರಿಯೆ ನಡೆದಿದೆ.

ನವದೆಹಲಿ: ಎರಡು ತಿಂಗಳ ಹಿಂದೆ ನೂರಾರು ಟ್ರೈನಿ ಉದ್ಯೋಗಿಗಳನ್ನು ವಜಾಗೊಳಿಸಿ ಸುದ್ದಿಯಾಗಿದ್ದ ಇನ್ಫೋಸಿಸ್‌ನ ಮೈಸೂರು ಕ್ಯಾಂಪಸ್‌ನಲ್ಲಿ ಮತ್ತೆ 30-45 ಉದ್ಯೋಗಿಗಳ ಸಾಮೂಹಿಕ ವಜಾ ಪ್ರಕ್ರಿಯೆ ನಡೆದಿದೆ.

30-45 ಟ್ರೈನಿ ಉದ್ಯೋಗಿಗಳು ಆಂತರಿಕ ಮೌಲ್ಯಮಾಪನ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ ಎನ್ನುವ ಕಾರಣ ನೀಡಿ ಸಂಸ್ಥೆ ಕೆಲಸದಿಂದ ವಜಾಗೊಳಿಸಿದೆ. ಆದರೆ ಇನ್ಫೋಸಿಸ್‌ ಈ ಸಲ ವಜಾಗೊಂಡ ಉದ್ಯೋಗಿಗಳಿಗೆ ಪರ್ಯಾಯ ಆಯ್ಕೆ ನೀಡಿದ್ದು, ಬಿಸಿನೆಸ್‌ ಪ್ರೊಸೆಸ್ ಮ್ಯಾನೆಜ್‌ಮೆಂಟ್‌(ಬಿಪಿಎಂ) ಮೂಲಕ 12 ವಾರಗಳ ಉಚಿತ ತರಬೇತಿ ನೀಡುವುದಾಗಿ ಹೇಳಿದೆ. ಅಲ್ಲದೇ ಇದರ ಭತ್ಯೆಯನ್ನು ಇನ್ಫೋಸಿಸ್‌ ಸಂಸ್ಥೆಯೇ ಭರಿಸುವುದಾಗಿ ಹೇಳಿದೆ. ಇದರ ಜೊತೆಗೆ ವಜಾಗೊಂಡ ಉದ್ಯೋಗಿಗಳಿಹೆ ರಿಲಿವಿಂಗ್ ಲೆಟರ್ ನೀಡುವ ತನಕ ಒಂದು ತಿಂಗಳ ವೇತನ ನೀಡುವುದಾಗಿ ಹೇಳಿದೆ. ಆದರೆ ಈ ಬಗ್ಗೆ ಇನ್ಪೋಸಿಸ್ ಇನ್ನು ಅಧಿಕೃತ ಹೇಳಿಕೆ ನೀಡಿಲ್ಲ.

2 ತಿಂಗಳ ಹಿಂದೆ ಇನ್ಪೋಸಿಸ್‌ ಮೈಸೂರು ಕ್ಯಾಂಪಸ್‌ನಲ್ಲಿ 300ಕ್ಕೂ ಹೆಚ್ಚು ಉದ್ಯೋಗಿಗಳನ್ನು ಆಂತರಿಕ ಮೌಲ್ಯಮಾಪನ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ ಎನ್ನುವ ಕಾರಣಕ್ಕೆ ವಜಾಗೊಳಿಸಲಾಗಿತ್ತು. ಇದರ ವಿರುದ್ಧ ಐಟಿ ಸಂಘಟನೆಗಳು ಕೇಂದ್ರ ಕಾರ್ಮಿಕ ಇಲಾಖೆಗೆ ದೂರು ಕೂಡಾ ನೀಡಿದ್ದವು.