ವ್ಯವಹಾರದಲ್ಲಿ ಮರಾಠಿ ಕಡ್ಡಾಯ : ಐಬಿಎಗೆ ಮಹಾರಾಷ್ಟ್ರ ನವನಿರ್ಮಾಣ ಸಮಿತಿ ಎಚ್ಚರಿಕೆ

| N/A | Published : Apr 11 2025, 12:35 AM IST / Updated: Apr 11 2025, 04:38 AM IST

ಸಾರಾಂಶ

  ಎಲ್ಲ ಬ್ಯಾಂಕ್‌ಗಳಲ್ಲಿ ಆರ್‌ಬಿಐ ಮಾನದಂಡದ ಪ್ರಕಾರ ಮರಾಠಿ ಕಡ್ಡಾಯಗೊಳಿಸಬೇಕು. ಇಲ್ಲದಿದ್ದರೆ ನಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸುತ್ತೇವೆ’ ಎಂದು ಮಹಾರಾಷ್ಟ್ರ ನವನಿರ್ಮಾಣ ಸಮಿತಿ (ಎಂಎನ್‌ಎಸ್‌)ಯು ಭಾರತೀಯ ಬ್ಯಾಂಕುಗಳ ಸಂಘ (ಐಬಿಎ)ಗೆ ಪತ್ರ ಬರೆದು ಎಚ್ಚರಿಕೆ ನೀಡಿದೆ.

ಮುಂಬೈ: ‘ಮಹಾರಾಷ್ಟ್ರದ ಎಲ್ಲ ಬ್ಯಾಂಕ್‌ಗಳಲ್ಲಿ ಆರ್‌ಬಿಐ ಮಾನದಂಡದ ಪ್ರಕಾರ ಮರಾಠಿ ಕಡ್ಡಾಯಗೊಳಿಸಬೇಕು. ಇಲ್ಲದಿದ್ದರೆ ನಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸುತ್ತೇವೆ’ ಎಂದು ಮಹಾರಾಷ್ಟ್ರ ನವನಿರ್ಮಾಣ ಸಮಿತಿ (ಎಂಎನ್‌ಎಸ್‌)ಯು ಭಾರತೀಯ ಬ್ಯಾಂಕುಗಳ ಸಂಘ (ಐಬಿಎ)ಗೆ ಪತ್ರ ಬರೆದು ಎಚ್ಚರಿಕೆ ನೀಡಿದೆ.

ಎಂಎನ್‌ಎಸ್‌ ಐಬಿಐಗೆ ಬುಧವಾರ ಈ ಬಗ್ಗೆ ಪತ್ರ ಬರೆದಿದ್ದು ಇದರಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸಮಿತಿ ಅಧ್ಯಕ್ಷ ರಾಜ್‌ ಠಾಕ್ರೆ ‘ ಬ್ಯಾಂಕುಗಳು ತಮ್ಮ ಸೇವೆಗಳಲ್ಲಿ ಹಿಂದಿ, ಇಂಗ್ಲೀಷ್‌, ಸ್ಥಳೀಯ ಭಾಷೆ ಎನ್ನುವ ತ್ರಿಭಾಷಾ ಸೂತ್ರ ಪಾಲಿಸಬೇಕು. 

ನೀವು ಬ್ಯಾಂಕ್‌ಗಳಿಗೆ ತಮ್ಮ ಸೇವೆಗಳಲ್ಲಿ ಮರಾಠಿಯನ್ನು ಬಳಸಬೇಕು ಎಂದು ಅಗತ್ಯ ಸೂಚನೆಯನ್ನು ನೀಡಬೇಕು. ಇಲ್ಲದಿದ್ದರೆ ಎಂಎನ್‌ಎಸ್‌ ತನ್ನ ಹೋರಾಟವನ್ನು ತೀವ್ರಗೊಳಿಸುತ್ತದೆ. ಅದಾದ ನಂತರ ಕಾನೂನು ಮತ್ತು ಸುವ್ಯವಸ್ಥೆ ವಿಚಾರಕ್ಕೆ ಬ್ಯಾಂಕುಗಳೇ ಜವಾಬ್ದಾರರಾಗಿರುತ್ತಾರೆ’ ಎಂದಿದ್ದಾರೆ.