ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ದುಗ್ಗನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ೯ ಮಂದಿ ಅಭ್ಯರ್ಥಿಗಳು ಗೆಲುವು ಸಾಧಿಸುವುದರ ಮೂಲಕ ಮತ್ತೊಮ್ಮೆ ಅಧಿಕಾರ ಹಿಡಿದಿದ್ದಾರೆ.ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸೊಸೈಟಿ ಚುನಾವಣೆಯಲ್ಲಿ ೯ ಮಂದಿ ಕಾಂಗ್ರೆಸ್ ಹಾಗೂ ಇಬ್ಬರು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಚುನಾವಣಾಧಿಕಾರಿಯಾಗಿ ಸಂತೋಷ್ ಕಾರ್ಯನಿರ್ವಹಿಸಿದ್ದರು.ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಾಗಿ ಆನಂದ್, ಡಿ.ಎಸ್.ನಂದೀಶ್, ಬಸವರಾಜು, ಡಿ.ಕೆ.ಬೋರೇಗೌಡ, ವೆಂಕಟೇಗೌಡ, ಕೆ.ಪಿ.ಜೈಶೀಲಾ, ಸ್ವಾಮಿ, ಎಚ್.ಎಂ.ಸ್ವಾಮಿ, ಜಿ.ಕೃಷ್ಣ ಹಾಗೂ ಜೆಡಿಎಸ್ ನ ಎಚ್.ಎಂ.ಗಣೇಶ್ ಮತ್ತು ಎನ್.ಕೆ.ಕಮಲಾ ಗೆಲುವು ಸಾಧಿಸಿದರು. ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪರ ಘೋಷಣೆ ಕೂಗಿ ಸಂಭ್ರಮಿಸಿದರು.
ಮುಖಂಡ ಮುತ್ತುರಾಜ್ ಮಾತನಾಡಿ, ಹಿಂದಿನ ಆವಧಿಯಲ್ಲಿ ಕಾಂಗ್ರೆಸ್ ಬೆಂಬಲಿತ ಆಡಳಿತ ಮಂಡಳಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ನಿರ್ದೇಶಕರಾಗಿ ಮತದಾರರು ಆಯ್ಕೆ ಮಾಡಿದ್ದಾರೆ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹಾಗೂ ಎಲ್ಲ ನಿರ್ದೇಶಕರ ಮಾರ್ಗದರ್ಶನದಲ್ಲಿ ಷೇರುದಾರ ಹಾಗೂ ರೈತರ ಅಭಿವೃದ್ಧಿಗೆ ಆಡಳಿತ ಮಂಡಳಿಗೆ ಶ್ರಮಿಸಲಿದೆ, ಗೆಲುವಿಗೆ ಸಹಕರಿಸಿದ ಎಲ್ಲಾರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.ನೂತನ ನಿರ್ದೇಶಕ ಆನಂದ್ ಮಾತನಾಡಿ, ಶಾಸಕ ಪಿ.ಎಂ ನರೇಂದ್ರಸ್ವಾಮಿ ಅವರ ಸಲಹೆ ಮತ್ತು ಸಹಕಾರದೊಂದಿಗೆ ರೈತರ ಹಿತ ಕಾಯುವ ಕೆಲಸವನ್ನು ಸೊಸೈಟಿ ನಿರ್ವಹಿಸಲಿದೆ, ಸರ್ಕಾರದಿಂದ ಸಿಗುವ ಸೌಲಭ್ಯವನ್ನು ರೈತರಿಗೆ ಅರ್ಹ ಫಲಾನುಭವಿಗಳಿಗೆ ಸಿಗುವಂತೆ ಎಲ್ಲಾ ನಿರ್ದೇಶಕರು ಶ್ರಮಿಸಲಿದ್ದಾರೆ, ಮತದಾರರ ಋಣ ತೀರಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ನೂತನ ನಿರ್ದೇಶಕರಿಗೆ ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಮುಖಂಡರು ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ದುಗ್ಗನಹಳ್ಳಿ ಗ್ರಾ.ಪಂ.ಅಧ್ಯಕ್ಷ ಗೋವಿಂದ ರಾಜು, ತಾಲೂಕು ವಕೀಲರ ಸಂಘದ ಅಧ್ಯಕ್ಷ ಡಿ.ಎಂ.ಸುಂದರ್, ಮುಖಂಡರಾದ ಶಂಕರ್, ರವಿಶೆಟ್ಟಿ, ಗುರುಸ್ವಾಮಿ, ವೀರೇಗೌಡ, ನಂಜುಂಡ, ನವೀನ್, ಮಂಜು, ಶ್ರೀನಿವಾಸ್, ನಂದೀಶ್, ನಾಗೇಂದ್ರ, ಚಿನ್ನಸ್ವಾಮಿ, ಮಹೇಶ್, ಯೋಗನಂದ, ತ್ಯಾಗರಾಜು, ವೆಂಕಟರಾಜು ಇದ್ದರು.