ಇಸ್ರೇಲ್‌ ಮೇಲೆ ದಾಳಿ ತೀವ್ರಗೊಳಿಸಿರುವ ಇರಾನ್‌ ಇದೆ ಮೊದಲ ಬಾರಿಗೆ 700 ಕೆಜಿ ಸಿಡಿತಲೆ ಹೊತ್ತು 2500 ಕಿ.ಮೀ ದೂರ ಸಾಗಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಸೆಜ್ಜಿಲ್ ಕ್ಷಿಪಣಿ ಬಳಸಿ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದೆ.

ಟೆಲ್‌ ಅವೀವ್: ಇಸ್ರೇಲ್‌ ಮೇಲೆ ದಾಳಿ ತೀವ್ರಗೊಳಿಸಿರುವ ಇರಾನ್‌ ಇದೆ ಮೊದಲ ಬಾರಿಗೆ 700 ಕೆಜಿ ಸಿಡಿತಲೆ ಹೊತ್ತು 2500 ಕಿ.ಮೀ ದೂರ ಸಾಗಿ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಸೆಜ್ಜಿಲ್ ಕ್ಷಿಪಣಿ ಬಳಸಿ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದೆ. ಮಾಡಿದೆ. ಇರಾನ್‌ನ ಈ ಬ್ಯಾಲಿಸ್ಟಿಕ್ ಕ್ಷಿಪಣಿ ಇನ್ನು ಕೂಡ ತಯಾರಿ ಹಂತದಲ್ಲಿದೆ ಎನ್ನಲಾಗಿತ್ತು. 

ಆದರೆ ಮೊದಲ ಬಾರಿ ಪ್ರಯೋಗಿಸಿ ನೆತನ್ಯಾಹುಗೆ ಆಘಾತ ನೀಡಿದೆ. ಜೂ. 18- 19ರ ರಾತ್ರಿ ಇಸ್ರೇಲ್ ರಾಜಧಾನಿ ಟೆಲ್ ಅವೀವ್‌ನಿಂದ 90 ಕಿ.ಮೀ ದೂರದಲ್ಲಿರುವ ಕಮಾಂಡ್‌ ಮತ್ತು ಗುಪ್ತಚರ ನೆಲೆ ಹಾಗೂ ಬೀರ್‌ ಶೆವಾದ ಸೊರೊಕೊ ಆಸ್ಪತ್ರೆಯ ಪಕ್ಕದಲ್ಲಿರುವ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ಮೇಲೆ ಕ್ಷಿಪಣಿ ಹಾರಿಸಿದೆ. ಈ ಕ್ಷಿಪಣಿ ಇರಾನ್‌ನ ನಟಾಂಜ್‌ನಿಂದ ಟೆಲ್‌ ಅವೀವ್‌ನ್ನು ಏಳು ನಿಮಿಷಗಳಲ್ಲಿ ತಲುಪಬಲ್ಲದು.