ಸಾರಾಂಶ
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಇತ್ತೀಚೆಗೆ ಪ್ರತಿಭಟನೆ ನಡೆಸಿದ ಇಸ್ಕಾನ್‌ನ ಅರ್ಚಕ ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಚಾರಿ ಅವರನ್ನು ಢಾಕಾದ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ.
ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಇತ್ತೀಚೆಗೆ ಪ್ರತಿಭಟನೆ ನಡೆಸಿದ ಇಸ್ಕಾನ್‌ನ ಅರ್ಚಕ ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಚಾರಿ ಅವರನ್ನು ಢಾಕಾದ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ.
ಈ ಕುರಿತು ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಭಾರತದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಸಲಹೆಗಾರ ಕಾಂಚನ್ ಗುಪ್ತಾ, ‘ಹಿಂದೂ ನಾಯಕ ಹಾಗೂ ಇಸ್ಕಾನ್ ಸನ್ಯಾಸಿ ಚಿನ್ಮಯ್ ಅವರನ್ನು ಮೊಹಮ್ಮದ್ ಯೂನಸ್ ನೇತೃತ್ವದ ಸರ್ಕಾರದ ಪೊಲೀಸರು ಢಾಕಾದಲ್ಲಿ ವಶಕ್ಕೆ ಪಡೆದಿದ್ದಾರೆ. ಹಿಂದೂಗಳನ್ನು ಗುರಿಯಾಗಿಸಿ ನಡೆಯುವ ದಾಳಿಗಳನ್ನು ಖಂಡಿಸಿ, ಇಸ್ಲಾಮಿಸ್ಟ್‌ಗಳಿಂದ ಭದ್ರತೆಗೆ ಆಗ್ರಹಿಸಿದ್ದ ಇವರನ್ನು ದೇಶದ್ರೋಹಿ ಎಂದು ಯೂನಸ್ ಸರ್ಕಾರ ಪರಿಗಣಿಸಿದೆ. ಚಿನ್ಮಯ್ ಅವರನ್ನು ಅಲ್ಲಿನ ಗುಪ್ತಚರ ವಿಭಾಗಕ್ಕೆ ಕರೆದೊಯ್ದಿರುವ ಶಂಕೆಯಿದೆ’ ಎಂದರು.ಇತ್ತೀಚೆಗೆ ಬಾಂಗ್ಲಾದಲ್ಲಿ ಹೆಚ್ಚುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ ಪ್ರತಿಭಟಿಸಿದವರಲ್ಲಿ ಚಿನ್ಮಯಿ ದಾಸ್ ಕೂಡ ಒಬ್ಬರು.