ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾದ ಮೊದಲ ಮಾನವ ರಹಿತ ಗಗನ ಯಾನದ ಮಾಡ್ಯೂಲ್‌ ರವಾನೆ

| Published : Jan 23 2025, 12:46 AM IST / Updated: Jan 23 2025, 04:53 AM IST

ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾದ ಮೊದಲ ಮಾನವ ರಹಿತ ಗಗನ ಯಾನದ ಮಾಡ್ಯೂಲ್‌ ರವಾನೆ
Share this Article
  • FB
  • TW
  • Linkdin
  • Email

ಸಾರಾಂಶ

 ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾದ ಮಾನವರಹಿತ ಗಗನಯಾನ ಮಿಷನ್‌ನ ಕ್ರ್ಯೂ (ಸಿಬ್ಬಂದಿ) ಮಾಡ್ಯೂಲ್‌ ಅನ್ನು ಇಲ್ಲಿನ ಎಲ್‌ಪಿಎಸ್‌ನಿಂದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರಕ್ಕೆ ರವಾನಿಸಲಾಗಿದೆ.

ಬೆಂಗಳೂರು: ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾದ ಮಾನವರಹಿತ ಗಗನಯಾನ ಮಿಷನ್‌ನ ಕ್ರ್ಯೂ (ಸಿಬ್ಬಂದಿ) ಮಾಡ್ಯೂಲ್‌ ಅನ್ನು ಇಲ್ಲಿನ ಎಲ್‌ಪಿಎಸ್‌ನಿಂದ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರಕ್ಕೆ ರವಾನಿಸಲಾಗಿದೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಇಸ್ರೋ, ‘ಲಿಕ್ವಿಡ್‌ ಪ್ರೊಪಲ್ಷನ್ ಸಿಸ್ಟಮ್‌ ಏಕೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಮೊದಲ ಸಿಬ್ಬಂದಿರಹಿತ ಗಗನಯಾನ ಯೋಜನೆಯ ಭಾಗವಾಗಿ ಇದನ್ನು ಕಳಿಸಲಾಗಿದೆ’ ಎಂದು ಮಾಹಿತಿ ನೀಡಿದೆ.

ಅಂತೆಯೇ, ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ ವಿನ್ಯಾಸಗೊಳಿಸಲಾದ, ಕ್ರ್ಯೂ ಮಾಡ್ಯೂಲ್‌ ಎಂತಹ ಪರಿಸ್ಥಿತಿಯಲ್ಲೂ ನೇರವಾಗಿ, ಸ್ಥಿರವಾಗಿರುವಂತೆ ನೋಡಿಕೊಳ್ಳುವ ಸಿಎಂಯುಎಸ್‌ ಅನ್ನೂ ಸಿಬ್ಬಂದಿ ಮಾಡ್ಯೂಲ್‌ಗೆ ಜೋಡಿಸಲಾಗಿದೆ. ಫೆಬ್ರವರಿಯಲ್ಲಿ ಇದರ ಪರೀಕ್ಷೆ ನಡೆಯಲಿದೆ.

ಗಗನಯಾನವು ಮಾನವರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ಯೋಜನೆಯಾದರೂ, ಮೊದಲಿ ಪ್ರಾಯೋಗಿಕವಾಗಿ ಮನುಷ್ಯರ ಜಾಗದಲ್ಲಿ ಮಾನವಾಕೃತಿಗಳನ್ನಿರಿಸಿ ಕಳಿಸಲಾಗುವುದು. ಇದು ಯಶಸ್ವಿಯಾದರೆ, ನಂತರ ಗಗನಯಾತ್ರಿಗಳನ್ನು ಕರೆದೊಯ್ಯಲಾಗುವುದು.