ಸಾರಾಂಶ
ಡಿ.16ರಂದು ಉಪಗ್ರಹದಿಂದ ತೆಗೆಯಲಾಗಿದ್ದ ರಾಮಮಂದಿರದ ಚಿತ್ರವನ್ನು ಇಸ್ರೋ ಹಂಚಿಕೊಂಡಿದೆ.
ಬೆಂಗಳೂರು: ರಾಮಮಂದಿರ ಉದ್ಘಾಟನೆಯಾಗುತ್ತಿರುವ ಹೊತ್ತಿನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಪಗ್ರಹದಿಂದ ತೆಗೆಯಲಾಗಿದ್ದ ಅಯೋಧ್ಯೆ ರಾಮಮಂದಿರದ ಚಿತ್ರವನ್ನು ಹಂಚಿಕೊಂಡಿದೆ.
ಇಸ್ರೋದ ಅಂಗಸಂಸ್ಥೆಯಾಗಿರುವ ಹೈದರಾಬಾದ್‌ನಲ್ಲಿರುವ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ ಈ ಚಿತ್ರವನ್ನು ಹಂಚಿಕೊಂಡಿದ್ದು, ಇದರಲ್ಲಿ ಭವ್ಯ ರಾಮಮಂದಿರವನ್ನು ಬಾಹ್ಯಾಕಾಶದಿಂದ ಉಪಗ್ರಹವೊಂದು ಚಿತ್ರ ತೆಗೆದಿದೆ.ಡಿ.16ರಂದು ಈ ಚಿತ್ರವನ್ನು ತೆಗೆಯಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಈ ಚಿತ್ರದಲ್ಲಿ ಅಯೋಧ್ಯೆ ರಾಮಮಂದಿರದ ಜೊತೆಗೆ ಅದರ ಆಸುಪಾಸಿನಲ್ಲಿರುವ ದಶರಥ ಮಹಲ್, ನಿರ್ಮಾಣ ಹಂತದಲ್ಲಿದ್ದ ಅಯೋಧ್ಯಾ ರೈಲು ನಿಲ್ದಾಣ ಮತ್ತು ಪವಿತ್ರ ಸರಯೂ ನದಿಯ ವಿಹಂಗಮ ನೋಟವಿದೆ.