ಸಾರಾಂಶ
ಪೋರ್ಟ್ ಲೂಯಿಸ್: 10 ವರ್ಷಗಳ ಬಳಿಕ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮಾರಿಷಸ್‌ಗೆ ನೀಡಿದ ಭೇಟಿಯ ಬಗ್ಗೆ ಮಾತನಾಡಿದ ಅಲ್ಲಿ ಆರೋಗ್ಯ ಸಚಿವ ಅನಿಲ್ ಕುಮಾರ್ ಬಚ್ಚೂ, ‘ಮೋದಿ ಅವರು ಮಾರಿಷಸ್ ನೆಲಕ್ಕೆ ಕಾಲಿಡುತ್ತಿದ್ದಂತೆ ಮಳೆ ಶುರುವಾಯಿತು. ಬಹಳ ದಿನಗಳಿಂದ ಬರದ ಮಳೆ ಏಕಾಏಕಿ ಸುರಿಯತೊಡಗಿತು’ ಎಂದಿದ್ದಾರೆ.
ಉಭಯ ದೇಶಗಳ ಸಂಬಂಧದ ಬಗ್ಗೆ ಮಾತನಾಡಿದ ಅವರು, ‘ಹಲವು ದೇಶಗಳ ಪ್ರಧಾನಿಗಳು ಇಲ್ಲಿಗೆ ಬರುತ್ತಾರಾದರೂ ಮೋದಿಯವರ ಭೇಟಿ ಐತಿಹಾಸಿಕವಾದುದು. ಭಾರತ ಸೀನಿದಾಗ ಮಾರಿಷಸ್‌ಗೆ ಶೀತವಾಗುತ್ತದೆ. ಇಂತಿರುವ ನಮ್ಮ ನಡುವಿನ ಬಾಂಧವ್ಯ ಬೆಳೆಯುತ್ತಾ ಹೋಗಲಿ’ ಎಂದು ಹಾರೈಸಿದರು.
ಹೋಳಿಯಿಂದ 2ನೇ ಪಿಯು ಪರೀಕ್ಷೆಗೆ ಬರಲಾಗದಿದ್ದರೆ ಮತ್ತೆ ಅವಕಾಶ: ಸಿಬಿಎಸ್ಸಿನವದೆಹಲಿ: ಮಾ.15ರ ಹೋಳಿ ಹಬ್ಬದಂದು ನಿಗದಿಯಾಗಿರುವ 12ನೇ ತರಗತಿಯ ಹಿಂದಿ ಪರೀಕ್ಷೆಗೆ ವಿದ್ಯಾರ್ಥಿಗಳು ಹೋಗಲು ಆಗದಿದ್ದರೆ ಅವರಿಗಾಗಿ ಸಿಬಿಎಸ್‌ಸಿ ಮತ್ತೊಂದು ಅವಕಾಶವನ್ನು ಕಲ್ಪಿಸಿದೆ.‘ಮಾ.15ರಂದು ನಿಗದಿಯಂತೆ ಪರೀಕ್ಷೆ ನಡೆಯಲಿದೆ. ಅಂದು ಹೋಳಿ ಹಬ್ಬವಿರುವ ಕಾರಣ ಯಾವ ವಿದ್ಯಾರ್ಥಿಗಳಿಗೆ ಹಾಜರಾಗಲು ಆಗುವುದಿಲ್ಲವೋ, ಅಂಥಹವರಿಗಾಗಿ ಮತ್ತೊಂದು ಅವಕಾಶವನ್ನು ಕಲ್ಪಿಸಲಾಗುವುದು. ಆ ದಿನಾಂಕವನ್ನು ಎಲ್ಲಾ ಪರೀಕ್ಷೆ ಮುಗಿದ ಬಳಿಕ ಇರಿಸಲಾಗುವುದು. ಕ್ರೀಡೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಬದಲಿ ದಿನ ಅವಕಾಶ ಕಲ್ಪಿಸುವ ರೀತಿಯಲ್ಲಿಯೇ ಈ ಮಕ್ಕಳಿಗೂ ಅವಕಾಶ ಕಲ್ಪಿಸಲಾಗುವುದು’ ಎಂದು ಸಿಬಿಎಸ್‌ಸಿ ಪರೀಕ್ಷಾ ನಿಯಂತ್ರಕ ಸನ್ಯಂ ಭಾರದ್ವಾಜ್ ಹೇಳಿದ್ದಾರೆ.