ಸಾರಾಂಶ
ಸಿಬಿಐ, ಇ.ಡಿ. ದಾಳಿಗೊಳಗಾದ 21 ಸಂಸ್ಥೆಗಳಿಂದ ಚುನಾವಣಾ ಬಾಂಡ್ ಖರೀದಿಯಾಗಿರುವುದಾಗಿ ಜೈರಾಂ ರಮೇಶ್ ಆರೋಪಿಸಿದ್ದಾರೆ.
ನವದೆಹಲಿ: ಚುನಾವಣಾ ಬಾಂಡ್ ಖರೀದಿಯಲ್ಲಿ ಮೋದಿ ಸರ್ಕಾರ ಸುಲಿಗೆ ಮಾಡಿದೆ. ಸಿಬಿಐ, ಇ.ಡಿ.ಯಿಂದ ತನಿಖೆಗೆ ಒಳಪಟ್ಟ ಒಟ್ಟು 21 ಸಂಸ್ಥೆಗಳು ದೇಣಿಗೆ ನೀಡಿವೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ‘ಅರಬಿಂದೋ ಫಾರ್ಮಾ, ನವಯುಗ ಎಂಜಿನಿಯರಿಂಗ್ ಕಂಪನಿ ಲಿಮಿಟೆಡ್, ರುಂಗ್ಟಾ ಸನ್ಸ್ ಪ್ರೈವೆಟ್ ಲಿಮಿಟೆಡ್, ಹೈದರಾಬಾದ್‌ನ ಶಿರಡಿ ಸಾಯಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ಸೇರಿದಂತೆ ಒಟ್ಟು 21 ಸಂಸ್ಥೆಗಳ ಮೇಲೆ ಸಿಬಿಐ, ಇ.ಡಿ. ದಾಳಿಯಾಗಿತ್ತು.
ಆ ಎಲ್ಲಾ ಸಂಸ್ಥೆಗಳು ಚುನಾವಣಾ ಬಾಂಡ್ ಖರೀದಿ ಮೂಲಕ ದೇಣಿಗೆ ನೀಡಿವೆ. ಚುನಾವಣಾ ಬಾಂಡ್ ಹಗರಣಕ್ಕೆ ಸಂಬಂಧಿಸಿದಂತೆ ಅನೇಕ ಉದಾಹರಣೆಗಳು ಸಿಗುತ್ತವೆ ಎಂದು ಆರೋಪಿಸಿದರು.