16 ಕೋಟಿ ಗ್ರಾಮೀಣ ಮನೆಗೆ ಕುಡಿವ ನೀರು : 5 ವರ್ಷದಲ್ಲಿ ಶೇ.61 ರಷ್ಟು ದಾಖಲೆ ಏರಿಕೆ

| Published : Oct 08 2024, 01:08 AM IST / Updated: Oct 08 2024, 04:37 AM IST

ಸಾರಾಂಶ

ಗ್ರಾಮಗಳಲ್ಲಿ ಮನೆಮನೆಗೂ ನಲ್ಲಿಗಳ ಮೂಲಕ ಶುದ್ಧ ಕುಡಿಯುವ ನೀರು ಸಂಪರ್ಕ ಕಲ್ಪಿಸುವ ಜಲ ಜೀವನ ಯೋಜನೆ ಇದೀಗ 16 ಕೋಟಿ ಗ್ರಾಮೀಣ ಮನೆಗಳಿಗೆ ಕುಡಿವ ನೀರು ಒದಗಿಸುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ನವದೆಹಲಿ: ಗ್ರಾಮಗಳಲ್ಲಿ ಮನೆಮನೆಗೂ ನಲ್ಲಿಗಳ ಮೂಲಕ ಶುದ್ಧ ಕುಡಿಯುವ ನೀರು ಸಂಪರ್ಕ ಕಲ್ಪಿಸುವ ಜಲ ಜೀವನ ಯೋಜನೆ ಇದೀಗ 16 ಕೋಟಿ ಗ್ರಾಮೀಣ ಮನೆಗಳಿಗೆ ಕುಡಿವ ನೀರು ಒದಗಿಸುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

2024ರ ಹೊತ್ತಿಗೆ ಗ್ರಾಮೀಣ ಪ್ರದೇಶಗಳ ಪ್ರತಿ ಮನೆಗೂ ನಲ್ಲಿಗಳ ಮೂಲಕ ನೀರು ಪೂರೈಕೆ ಗುರಿ ಇದೆ. ಈಗಾಗಲೇ ಗ್ರಾಮೀಣ ಭಾಗದ ಶೇ.78.58ರಷ್ಟು ಮನೆಗಳಿಗೆ ಈ ಸೌಲಭ್ಯ ತಲುಪಿದೆ. 2019ರ ಆ.15ರಂದು ಆರಂಭವಾದ ಈ ಯೋಜನೆ ಆರಂಭವಾದ ಬಳಿಕ ಸೌಲಭ್ಯದ ವ್ಯಾಪ್ತಿ ಶೇ.61ರಷ್ಟು ಏರಿಕೆಯಾಗಿದೆ. 2019ರಲ್ಲಿ ದೇಶದ ಗ್ರಾಮೀಣ ಪ್ರದೇಶಗಳ ಶೇ.18ರಷ್ಟು ಮನೆಗಳಿಗೆ ಮಾತ್ರವೇ ಇಂಥ ಸೌಲಭ್ಯ ಇತ್ತು.

 ಕಳೆದ 5 ವರ್ಷಗಳಲ್ಲಿ 11.95 ಕೋಟಿ ಹೊಸ ನಲ್ಲಿಗಳಿಗೆ ನೀರಿನ ಸಂಪರ್ಕ ಒದಗಿಸಲಾಗಿದ್ದು, ಗೋವಾ, ಹರ್ಯಾಣ, ತೆಲಂಗಾಣ, ಹಿಮಾಚಲ ಪ್ರದೇಶಗಳ ಶೇ.100ರಷ್ಟು ಮನೆಗಳನ್ನು ಇದು ಒಳಗೊಂಡಿದೆ. ಜೊತೆಗೆ 9.29 ಶಾಲೆ ಮತ್ತು ಅಂಗನವಾಡಿಗಳಿಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ. ಇದರ ಅಡಿಯಲ್ಲಿ 24 ಲಕ್ಷ ಮಹಿಳೆಯರಿಗೆ ನೀರಿನ ಗುಣಮಟ್ಟ ಪರೀಕ್ಷಿಸುವ ತರಬೇತಿಯನ್ನೂ ನೀಡಲಾಗಿದೆ ಎಂದು ಸರ್ಕಾರ ಹೇಳಿದೆ.