ಬೆಂಗಳೂರು ರೈಲು ಅವಘಡ: ಜಾರ್ಖಂಡಲ್ಲಿ ಇಬ್ಬರು ಸಾವು

| Published : Feb 29 2024, 02:08 AM IST

ಬೆಂಗಳೂರು ರೈಲು ಅವಘಡ: ಜಾರ್ಖಂಡಲ್ಲಿ ಇಬ್ಬರು ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಹಳಿಯಲ್ಲಿ ಬೆಂಕಿ ಭಯದಿಂದ ರೈಲು ಇಳಿದ ಜನರ ಮೇಲೆ ಹರಿದ ಪಕ್ಕದ ಹಳಿಯ ರೈಲಿನಿಂದಾಗಿ ಇಬ್ಬರು ಸಾವನ್ನಪ್ಪಿದ್ದು ಹಲವು ಮಂದಿಗೆ ಗಾಯಗಳಾಗಿವೆ.

ಜಮ್ತಾರಾ (ಜಾರ್ಖಂಡ್):ಜಾರ್ಖಂಡ್‌ನ ಜಮ್ತಾರಾದ ಕಾಲಜಾರಿಯಾ ರೈಲು ನಿಲ್ದಾಣದಲ್ಲಿ ರೈಲು ದುರಂತ ಸಂಭವಿಸಿದ್ದು, ಭಾಗಲ್ಪುರದಿಂದ ಬೆಂಗಳೂರಿಗೆ ಬರುತ್ತಿದ್ದ ರೈಲಿನಲ್ಲಿದ್ದ ಇಬ್ಬರು ಪ್ರಯಾಣಿಕರು ಇನ್ನೊಂದು ರೈಲು ಹರಿದು ಸಾವನ್ನಪ್ಪಿದ್ದಾರೆ.

ಭಾಗಲ್ಪುರದಿಂದ ಬೆಂಗಳೂರಿಗೆ ಅಂಗಾ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು, ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿ ಸೃಷ್ಟಿಯಾಗಿ ಭಯಭೀತರಾಗಿ ರೈಲಿನಿಂದ ಇಳಿದಿದ್ದಾರೆ. ಆಗ ಬೆಂಕಿಯಿಂದ ತಪ್ಪಿಸಿಕೊಳ್ಳಲು ಅವರು ಹಳಿಗಳ ಮೇಲೆ ಓಡಲು ಪ್ರಯತ್ನಿಸಿದಾಗ, ಪಕ್ಕದ ಮಾರ್ಗದಲ್ಲಿ ಚಲಿಸುತ್ತಿದ್ದ ಮತ್ತೊಂದು ರೈಲು ಅವರ ಮೇಲೆ ಹರಿದಿದೆ.ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಗಾಯಾಳುಗಳನ್ನು ಜಮ್ತಾರಾಕ್ಕೆ ಕರೆತರಲು ವೈದ್ಯಕೀಯ ತಂಡಗಳು, 4 ಆಂಬ್ಯುಲೆನ್ಸ್‌ಗಳು ಮತ್ತು 3 ಬಸ್‌ಗಳು ಸ್ಥಳಕ್ಕೆ ಧಾವಿಸಲಾಗಿದೆ ಎಂದು ಜಮ್ತಾರಾ ಉಪ ಆಯುಕ್ತರು ತಿಳಿಸಿದ್ದಾರೆ.