2 ಹಂತದಲ್ಲಿ 2823 ಅಭ್ಯರ್ಥಿಗಳ ಪೈಕಿ ಕೇವಲ 235 ಮಹಿಳೆಯರು

| Published : Apr 29 2024, 01:40 AM IST / Updated: Apr 29 2024, 04:55 AM IST

2 ಹಂತದಲ್ಲಿ 2823 ಅಭ್ಯರ್ಥಿಗಳ ಪೈಕಿ ಕೇವಲ 235 ಮಹಿಳೆಯರು
Share this Article
  • FB
  • TW
  • Linkdin
  • Email

ಸಾರಾಂಶ

ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ನೀಡುವ ಮಸೂದೆಗೆ ಸಂಸತ್ತಿನ ಅನುಮೋದನೆ ಸಿಕ್ಕರೂ, ಹಾಲಿ ಲೋಕಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಒಡಿಶಾದ ಬಿಜೆಡಿ ಹೊರತುಪಡಿಸಿದರೆ ಉಳಿದ ಎಲ್ಲಾ ರಾಜಕೀಯ ಪಕ್ಷಗಳು ಈ ಮೀಸಲು ಕಳಕಳಿ ಬದಿಗೊತ್ತಿರುವುದು ಸಾಬೀತಾಗಿದೆ.

ನವದೆಹಲಿ: ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ನೀಡುವ ಮಸೂದೆಗೆ ಸಂಸತ್ತಿನ ಅನುಮೋದನೆ ಸಿಕ್ಕರೂ, ಹಾಲಿ ಲೋಕಸಭೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಒಡಿಶಾದ ಬಿಜೆಡಿ ಹೊರತುಪಡಿಸಿದರೆ ಉಳಿದ ಎಲ್ಲಾ ರಾಜಕೀಯ ಪಕ್ಷಗಳು ಈ ಮೀಸಲು ಕಳಕಳಿ ಬದಿಗೊತ್ತಿರುವುದು ಸಾಬೀತಾಗಿದೆ.

ಒಟ್ಟು ಏಳು ಹಂತದಲ್ಲಿ ನಡೆಯಲಿರುವ ಲೋಕಸಭಾ ಕದನದಲ್ಲಿ ಈಗಾಗಲೇ ಎರಡು ಹಂತದ ಮತದಾನ ಪ್ರಕ್ರಿಯೆ ಮುಗಿದಿದೆ. ಒಟ್ಟು 2823 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಆದರೆ ಇಷ್ಟು ಅಭ್ಯರ್ಥಿಗಳ ಪೈಕಿ ವಿವಿಧ ರಾಜಕೀಯ ಪಕ್ಷಗಳು ಅವಕಾಶ ನೀಡಿದ್ದು ಕೇವಲ 235 ಮಹಿಳೆಯರಿಗೆ ಮಾತ್ರವೇ. ಅಂದರೆ ಶೇ.8ರಷ್ಟು ಮಾತ್ರವೇ ಪ್ರಾತಿನಿಧ್ಯ ಸಿಕ್ಕಿದೆ.

ಮೊದಲ ಹಂತದ ಚುನಾವಣೆಯಲ್ಲಿ 135 , ಎರಡನೇ ಹಂತದಲ್ಲಿ ಚುನಾವಣೆಯಲ್ಲಿ 100 ಜನ ಮಹಿಳಾ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು.

ಮೊದಲ ಹಂತದಲ್ಲಿ ಮಹಿಳಾ 135 ಅಭ್ಯರ್ಥಿಗಳ ಪೈಕಿ ತಮಿಳುನಾಡಿನಿಂದ ಅತ್ಯಧಿಕ 100 ಅಭ್ಯರ್ಥಿಗಳು ಸ್ಪರ್ಧಿಸಿದ್ದರು . ಎರಡನೇ ಹಂತದಲ್ಲಿ ಕೇರಳದಲ್ಲಿ ಅತಿಹೆಚ್ಚು ಅಂದರೆ 24 ಮಹಿಳೆಯರು ಎಲೆಕ್ಷನ್ ಅಖಾಡದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಒಟ್ಟು 235 ಮಹಿಳಾ ಅಭ್ಯರ್ಥಿಗಳ ಪೈಕಿ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ 69, ಕಾಂಗ್ರೆಸ್ 44, ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿವೆ.ಆದರೆ ಒಡಿಶಾದಲ್ಲಿ ಬಿಜೆಡಿ ಮಾತ್ರವೇ ಮಹಿಳೆಯರಿಗೆ ಶೇ.33ರಷ್ಟು ಟಿಕೆಟ್‌ ನೀಡಿಕೆಯ ಭರವಸೆ ಈಡೇರಿಸಿದೆ.