ಸಾರಾಂಶ
ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಜ್ವಾಲಾ ಎಂಬ ಚೀತಾಗೆ ಮೂರು ಮರಿಗಳು ಜನಿಸಿವೆ ಎಂದು ಕೇಂದ್ರ ಪರಿಸರ ಖಾತೆ ಸಚಿವ ಭೂಪೇಂದ್ರ ಯಾದವ್ ತಿಳಿಸಿದ್ದಾರೆ.
ಭೋಪಾಲ್: ಕುನೋ ರಾಷ್ಟ್ರೀಯ ಉದ್ಯಾನದಲ್ಲಿರುವ ನಮೀಬಿಯನ್ ಚೀತಾ ‘ಜ್ವಾಲಾ’ಗೆ ಜ.20ರಂದು ಮೂರು ಮುದ್ದಾದ ಮರಿಗಳು ಜನಿಸಿವೆ ಎಂದು ಕೇಂದ್ರ ಪರಿಸರ ಖಾತೆ ಸಚಿವ ಭೂಪೇಂದ್ರ ಯಾದವ್ ತಿಳಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ‘ ಒಂದೇ ತಿಂಗಳಲ್ಲಿ ಕುನೋಗೆ 6 ಅತಿಥಿಗಳ ಆಗಮನವಾಗಿದೆ. ಕಳೆದೆರಡು ವಾರದ ಮುಂಚೆ ಆಶಾ ಮೂರು ಮುದ್ದಾದ ಚೀತಾ ಮರಿಗಳಿಗೆ ಜನ್ಮ ನೀಡಿದಂತೆ ಇಂದು ಜ್ವಾಲಾ ಸಹ ಮೂರು ಮುದ್ದಾದ ಮರಿಗಳಿಗೆ ಜನ್ಮ ನೀಡಿದೆ.
ಈ ಸಮಯದಲ್ಲಿ ನಾನು ಪ್ರಾಜೆಕ್ಟ್ ಚೀತಾದ ಎಲ್ಲ ಸಿಬ್ಬಂದಿಗಳು ಮತ್ತು ವನ್ಯಪ್ರೇಮಿಗಳಿಗೆ ಅಭಿನಂದಿಸುತ್ತೇನೆ ಮತ್ತು ಭಾರತದಲ್ಲಿ ವನ್ಯಜೀವಿಗಳ ಸಂತತಿ ಬೆಳೆಯಲಿ ಎಂದು ಆಶಿಸುತ್ತೇನೆ’ ಎಂದು ತಿಳಿಸಿದ್ದಾರೆ.ಮೂರು ಮರಿಗಳ ಜನನದೊಂದಿಗೆ ಭಾರತದಲ್ಲಿ ಚಿರತೆಗಳ ಸಂಖ್ಯೆ 20ಕ್ಕೇರಿದೆ.