30 ಲೀ. ಎದೆಹಾಲು ದಾನಮಾಡಿ ಬ್ಯಾಡ್ಮಿಂಟನ್ತಾರೆ ಜ್ವಾಲಾ ಸಾರ್ಥಕತೆ

| Published : Sep 16 2025, 12:04 AM IST

30 ಲೀ. ಎದೆಹಾಲು ದಾನಮಾಡಿ ಬ್ಯಾಡ್ಮಿಂಟನ್ತಾರೆ ಜ್ವಾಲಾ ಸಾರ್ಥಕತೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಖ್ಯಾತ ಬ್ಯಾಡ್ಮಿಂಟನ್‌ ತಾರೆ ಜ್ವಾಲಾ ಗುಟ್ಟ ಇದೀಗ ಇನ್ನೊಂದು ವಿಷಯಕ್ಕೆ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಜ್ವಾಲಾ ಅಂದಿನಿಂದಲೂ ಎದೆಹಾಲು ದಾನದ ಮಹತ್ವ ಮತ್ತು ಅಗತ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದರು. ಅದರ ಜೊತೆಜೊತೆಗೇ ಅವರು ಸ್ವತಃ 30 ಲೀ.ನಷ್ಟು ಎದೆಹಾಲು ದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.

ಹೈದರಾಬಾದ್‌: ಭಾರತದ ಖ್ಯಾತ ಬ್ಯಾಡ್ಮಿಂಟನ್‌ ತಾರೆ ಜ್ವಾಲಾ ಗುಟ್ಟ ಇದೀಗ ಇನ್ನೊಂದು ವಿಷಯಕ್ಕೆ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಜ್ವಾಲಾ ಅಂದಿನಿಂದಲೂ ಎದೆಹಾಲು ದಾನದ ಮಹತ್ವ ಮತ್ತು ಅಗತ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದರು. ಅದರ ಜೊತೆಜೊತೆಗೇ ಅವರು ಸ್ವತಃ 30 ಲೀ.ನಷ್ಟು ಎದೆಹಾಲು ದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ.

‘ತಾಯಿ ಇಲ್ಲದ, ಅನಾರೋಗ್ಯಕ್ಕೆ ತುತ್ತಾಗಿರುವ ನವಜಾತ ಶಿಶುಗಳಿಗೆ ಎದೆಹಾಲು ತುಂಬಾ ಮುಖ್ಯವಾಗುತ್ತದೆ. ಎದೆಹಾಲು ಮಕ್ಕಳಿಗೆ ಪೌಷ್ಠಿಕತೆ ವೃದ್ಧಿಗೆ ಸಹಾಯ ಮಾಡುತ್ತದೆ. ನೀವು ಪರರ ಕುಟುಂಬದ ಹೀರೋ ಆಗಬಹುದು’ ಎಂದು ಕ್ಷೀರ ದಾನದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಜ್ವಾಲಾ ನಟ ವಿಶಾಲ್‌ ವಿಷ್ಣು ಅವರನ್ನು 2021ರಲ್ಲಿ ವಿವಾಹವಾಗಿದ್ದರು.

==

1.35 ಕೋಟಿ ಇನಾಮು ಹೊಂದಿದ್ದ 3 ನಕ್ಸಲರು ಯೋಧರ ಗುಂಡಿಗೆ ಬಲಿ

ರಾಂಚಿ: ಜಾರ್ಖಂಡ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆ ವೇಳೆ ತಲೆಗೆ 1.35 ಕೋಟಿ ರು. ಇನಾಮು ಹೊಂದಿದ್ದ ಓರ್ವ ಸೇರಿದಂತೆ ಮೂವರು ನಕ್ಸಲರ ಸಾವನ್ನಪ್ಪಿದ್ದಾರೆ. ಇಲ್ಲಿನ ಹಜಾರಿಬಾಗ್‌ ಜಿಲ್ಲೆಯಲ್ಲಿ ಸೋಮವಾರ ಘಟನೆ ನಡೆದಿದೆ. ಪಂಟಿತ್ರಿ ಅರಣ್ಯದಲ್ಲಿ ನಿಷೇಧಿತ ಸಿಪಿಎಂ ನಾಯಕ ಸಹದೇವ್‌ ಸೊರೆನ್‌ ತಂಡ ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ತಲೆಗೆ ಕೋಟಿ ರು. ಬಹುಮಾನ ಹೊತ್ತಿದ್ದ ಸಹದೇವ್, 25 ಲಕ್ಷ ರು. ಬಹುಮಾನ ಹೊಂದಿದ್ದ ರಘುನಾಥ್‌ ಮತ್ತು 10 ಲಕ್ಷ ರು. ಬಹುಮಾನ ಹೊಂದಿದ್ದ ಗಂಝು ಬಲಿಯಾಗಿದ್ದಾರೆ.