ಬೆಂಗಳೂರಿನ ಕೈನಾ ವಿಶ್ವದ ಅತಿ ಕಿರಿಯ ಸ್ಕೂಬಾ ಡೈವರ್‌!

| Published : Jun 16 2024, 01:48 AM IST / Updated: Jun 16 2024, 04:17 AM IST

ಬೆಂಗಳೂರಿನ ಕೈನಾ ವಿಶ್ವದ ಅತಿ ಕಿರಿಯ ಸ್ಕೂಬಾ ಡೈವರ್‌!
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನ 12 ವರ್ಷದ ಕೈನಾ ಖರೆ ವಿಶ್ವದಲ್ಲೇ ಅತ್ಯಂತ ಕಿರಿಯ ವಯಸ್ಸಿನ ಸ್ಕೂಬಾ ಡೈವಿಂಗ್ ಮಾಸ್ಟರ್‌ ಎನ್ನುವ ದಾಖಲೆಗೆ ಪಾತ್ರಳಾಗಿದ್ದಾಳೆ.

ನವದೆಹಲಿ: ಬೆಂಗಳೂರಿನ 12 ವರ್ಷದ ಕೈನಾ ಖರೆ ವಿಶ್ವದಲ್ಲೇ ಅತ್ಯಂತ ಕಿರಿಯ ವಯಸ್ಸಿನ ಸ್ಕೂಬಾ ಡೈವಿಂಗ್ ಮಾಸ್ಟರ್‌ ಎನ್ನುವ ದಾಖಲೆಗೆ ಪಾತ್ರಳಾಗಿದ್ದಾಳೆ. ತನ್ನ 10ನೇಯ ವಯಸ್ಸಿನಲ್ಲಿ ಸ್ಕೂಬಾ ಡೈವಿಂಗ್ ಆರಂಭಿಸಿದ್ದ ಈಕೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ತಮ್ಮ ಮೊದಲ ಪ್ರದರ್ಶನವನ್ನು ನೀಡಿದ್ದರು. ಇವರು ಸ್ಕೂಬಾ ಡೈವಿಂಗ್‌ನಲ್ಲಿ ಅತ್ಯಂತ ಉನ್ನತ ಪದವಿಯಾದ ‘ಮಾಸ್ಟರ್ ಸ್ಕೂಬಾ ಡೈವಿಂಗ್’ ಪ್ರಮಾಣ ಪತ್ರವನ್ನು ತಮ್ಮ ಕಿರಿವಯಸ್ಸಿನಲ್ಲಿ ಪಡೆದಿದ್ದಾರೆ.

ಈ ಕುರಿತು ಖಾಸಗಿ ಸುದ್ದಿ ಸಂಸ್ಥೆ ಎಎನ್‌ಐಗೆ ಸಂದರ್ಶನ ನೀಡಿರುವ ಕೈನಾ,‘ ನಾನು 10 ವರ್ಷದವಳಿದ್ದಾಗ, ಮೊದಲ ಬಾರಿ ಅಂಡಮಾನ್‌, ನಿಕೋಬಾರ್ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಪ್ರದರ್ಶನ ಮಾಡಿದ್ದೆ. ಇಂಡೋನೆಷ್ಯಾದ ಬಾಲಿಯಲ್ಲಿ ಓಪನ್ ವಾಟರ್ ಕೋರ್ಸ್‌ ಮತ್ತು ಥೈಲ್ಯಾಂಡ್‌ನಲ್ಲಿ ಅಡ್ವಾನ್ಸ್‌ ಕೋರ್ಸ್‌ ಮುಗಿಸಿದ್ದೆ. ಕೊನೆಗೆ ಅಂಡಮಾನ್‌, ನಿಕೋಬಾರ್ ದ್ವೀಪದಲ್ಲಿ ‘ಮಾಸ್ಟರ್ ಸ್ಕೂಬಾ ಡೈವಿಂಗ್’ ಆಗಿದ್ದೇನೆ. ನೀರಿನ ಆಳದಲ್ಲಿನ ಪ್ರದರ್ಶನ ತನ್ನ ಮನಸ್ಸಿಗೆ ಶಾಂತತೆ ನೀಡುತ್ತದೆ’ ಎಂದಿದ್ದಾರೆ. ಅಲ್ಲದೇ ಕೈನಾ ಸ್ಕೂಬಾ ಡೈವಿಂಗ್ ತಮ್ಮ ಸಾಧನೆಗೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಪೋಷಕರ ಬೆಂಬಲದಿಂದ ಈ ಸಾಧನೆ ಮಾಡುವುದಕ್ಕೆ ಸಾಧ್ಯವಾಯಿತು ಎಂದು ಹೇಳಿದ್ದಾರೆ.