ಸಾರಾಂಶ
ಬೆಟ್ಟಿಂಗ್ ಆ್ಯಪ್‌ವೊಂದರ ಪರವಾಗಿ ಪ್ರಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ರಣಬೀರ್ ಕಪೂರ್ ಬಳಿಕ ನಟಿ ಹುಮಾ ಖುರೇಷಿ, ಹೀನಾ ಖಾನ್ ಮತ್ತು ಕಾಮಿಡಿ ಶೋ ಖ್ಯಾತಿಯ ಕಪಿಲ್ ಶರ್ಮಾ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ಗುರುವಾರ ಸಮನ್ಸ್ ಜಾರಿ ಮಾಡಿದೆ
ನವದೆಹಲಿ: ಬೆಟ್ಟಿಂಗ್ ಆ್ಯಪ್‌ವೊಂದರ ಪರವಾಗಿ ಪ್ರಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ರಣಬೀರ್ ಕಪೂರ್ ಬಳಿಕ ನಟಿ ಹುಮಾ ಖುರೇಷಿ, ಹೀನಾ ಖಾನ್ ಮತ್ತು ಕಾಮಿಡಿ ಶೋ ಖ್ಯಾತಿಯ ಕಪಿಲ್ ಶರ್ಮಾ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ಗುರುವಾರ ಸಮನ್ಸ್ ಜಾರಿ ಮಾಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣ ಎದುರಿಸುತ್ತಿರುವ ಛತ್ತೀಸ್‌ಗಢದ ಮಹದೇವ್ ಬೆಟ್ಟಿಂಗ್ ಆ್ಯಪ್ ಪರವಾಗಿ ಪ್ರಚಾರ ಮಾಡಿದ್ದಕ್ಕಾಗಿ ಹುಮಾ ಖುರೇಷಿ ಹಾಗೂ ಹೀನಾ ಖಾನ್‌ಗೆ ಸಮನ್ಸ್ ಜಾರಿ ಮಾಡಿದ್ದರೆ, ಈ ಆ್ಯಪ್‌ನ ಯಶಸ್ಸಿನ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂಬ ಕಾರಣಕ್ಕೆ ಕಪಿಲ್‌ಗೆ ವಿಚಾರಣೆಗೆ ಬರಹೇಳಲಾಗಿದೆ.
ಆ್ಯಪ್‌ನ ಸಕ್ಸಸ್ ಪಾರ್ಟಿ ಕಳೆದ ತಿಂಗಳು ದುಬೈನಲ್ಲಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ನಟ, ನಟಿಯರು ಇ.ಡಿ. ಕಣ್ಗಾವಲಿನಲ್ಲಿದ್ದಾರೆ ಎಂದು ಹೇಳಲಾಗಿದೆ.
)
)
)
;Resize=(128,128))
;Resize=(128,128))
;Resize=(128,128))
;Resize=(128,128))