ಇಂದು ಅಂಬಾನಿ ಮಗನ ಮದುವೆ: ಜಾಗತಿಕ ಗಣ್ಯಾತಿಗಣ್ಯರ ಆಗಮನ

| Published : Jul 12 2024, 01:36 AM IST / Updated: Jul 12 2024, 05:34 AM IST

anant ambani wedding card
ಇಂದು ಅಂಬಾನಿ ಮಗನ ಮದುವೆ: ಜಾಗತಿಕ ಗಣ್ಯಾತಿಗಣ್ಯರ ಆಗಮನ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಶ್ರೀಮಂತ ಉದ್ಯಮಿ, ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಮತ್ತು ನೀತಾ ಅಂಬಾನಿ ಪುತ್ರ ಅನಂತ್‌ ಮತ್ತು ರಾಧಿಕಾ ಮರ್ಚೆಂಟ್‌ ಅದ್ಧೂರಿ ವಿವಾಹ ಕಾರ್ಯಕ್ರಮ ಶುಕ್ರವಾರ ನಡೆಯಲಿದೆ.

ಮುಂಬೈ: ಭಾರತದ ಶ್ರೀಮಂತ ಉದ್ಯಮಿ, ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಮತ್ತು ನೀತಾ ಅಂಬಾನಿ ಪುತ್ರ ಅನಂತ್‌ ಮತ್ತು ರಾಧಿಕಾ ಮರ್ಚೆಂಟ್‌ ಅದ್ಧೂರಿ ವಿವಾಹ ಕಾರ್ಯಕ್ರಮ ಶುಕ್ರವಾರ ನಡೆಯಲಿದೆ.

ಮುಂಬೈನ ಜಿಯೋ ವರ್ಲ್ಡ್ ಕನ್ವೆಂಷನ್ ಸೆಂಟರ್‌ ವಿವಾಯ ನಡೆಯಲಿದ್ದು ಹಾಲಿವುಡ್‌, ಬಾಲಿವುಡ್‌ನ ಖ್ಯಾತ ನಟರು, ಜಾಗತಿಕ ಉದ್ಯಮಿಗಳು, ಕ್ರೀಡಾಪಟುಗಳು, ರಾಜಕಾರಣಿಗಳು ಮತ್ತು ಇತರೆ ಗಣ್ಯರು ಭಾಗಿಯಾಗಲಿದ್ದಾರೆ. ವಿವಾಹಕ್ಕೆ ಅಂಬಾನಿ ಕುಟುಂಬ 2600 ಕೋಟಿ ರು.ಗೂ ಹೆಚ್ಚಿನ ಹಣ ವ್ಯಯಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಖ್ಯಾತ ಪಾಪ್‌ ಗಾಯಕಿ ಕಿಮ್ ಮತ್ತು ಖ್ಲೋ ಕರ್ದಾಶಿಯಾನ್‌, ಬಾಕ್ಸರ್ ಮೈಕ್ ಟೈಸನ್, ಬ್ರಿಟನ್‌ನ ಮಾಜಿ ಪ್ರಧಾನಿಗಳಾದ ಬೋರಿಸ್ ಜಾನ್ಸನ್, ಟೋನಿ ಬ್ಲೇರ್, ಇಂಗ್ಲೆಂಡ್‌ ಫುಟ್ಬಾಲ್‌ ತಾರೆ ಡೇವಿಡ್‌ ಬೆಕ್‌ಹ್ಯಾಮ್‌, ನಟರಾದ ಸಲ್ಮಾನ್ ಖಾನ್, ಶಾರುಕ್ ಖಾನ್, ಅಮಿರ್ ಖಾನ್, ಅಕ್ಷಯ್ ಕುಮಾರ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ಅಮಿತಾಬ್ ಬಚ್ಚನ್, ಪ್ರಿಯಾಂಕಾ ಚೋಪ್ರಾ ಹಾಗೂ ಐಶ್ವರ್ಯ ರೈ ದಂಪತಿ ವಿವಾಹಕ್ಕೆ ಸಾಕ್ಷಿಯಾಗಲಿದ್ದಾರೆ.

ನಾಲ್ಕು ತಿಂಗಳ ಹಿಂದೆ ಮುಖೇಶ್ ಅಂಬಾನಿಯ ಹುಟ್ಟೂರಾದ ಗುಜರಾತ್‌ನ ಜಾಮ್ನಗರದಲ್ಲಿ ನಡೆದ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಮೆಟಾ ಸಂಸ್ಥಾಪಕ ಮಾರ್ಕ್ ಝುಕರ್‌ಬರ್ಗ್, ಮೈಕ್ರೋಸಾಫ್ಟ್‌ ಮುಖ್ಯಸ್ಥ ಬಿಲ್ ಗೇಟ್ಸ್, ಬ್ಲ್ಯಾಕ್‌ರಾಕ್ ಸಹಸಂಸ್ಥಾಪಕ ಲ್ಯಾರಿ ಫಿಂಕ್, ಆಲ್ಫಬೆಟ್ ಸಿಇಒ ಸುಂದರ್ ಪಿಚೈ, ಸೌದಿ ಅರಾಮ್ಕೋ ಅಧ್ಯಕ್ಷ ಯಾಸಿರ್ ಅಲ್ ರುಮಯ್ಯನ್ ಸೇರಿ 1,200 ಆಹ್ವಾನಿತರು ಉಪಸ್ಥಿತರಿದ್ದು, ಖ್ಯಾತ ಗಾಯಕಿ ರಿಹಾನರ ಗಾಯನ ಪ್ರದರ್ಶನವಿತ್ತು.