ಸಾರಾಂಶ
ನವದೆಹಲಿ: ಪೋಲೋ ಆಡುತ್ತಿದ್ದಾಗ ಆಕಸ್ಮಿಕವಾಗಿ ಜೇನು ನೊಣ ನುಂಗಿದ ಪರಿಣಾಮ ಹೃದಯಾಘಾತ ಉಂಟಾಗಿ ನಟಿ ಕರಿಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ( 53) ಇಂಗ್ಲೆಂಡ್‌ನಲ್ಲಿ ನಿಧನರಾಗಿದ್ದಾರೆ.
ಸಿನಾ ಕಾಮಸ್ಟರ್ ಎನ್ನುವ ಸಂಸ್ಥೆಯ ಮುಖ್ಯಸ್ಥರಾಗಿದ್ದ ಸಂಜಯ್ ಸಂಜಯ್ ಕಪೂರ್ ಇಂಗ್ಲೆಂಡ್‌ನಲ್ಲಿ ನೆಲೆಸಿದ್ದರು, ಪೋಲೋ ಆಡುತ್ತಿದ್ದಾಗ ಶುಕ್ರವಾರ ಆಕಸ್ಮಿಕವಾಗಿ ಜೇನು ನೊಣ ನುಂಗಿದ್ದಾರೆ. ಈ ವೇಳೆ ಜೇನು ನೊಣ ಅವರ ಗಂಟಲಿಗೆ ಕಡಿದಿದೆ. ಇದರಿಂದ ಅಲರ್ಜಿ ಉಂಟಾಗಿ, ಹೃದಯ ಸ್ನಾಯುವಿನ ಊತ ಸಂಭವಿಸಿದೆ. ಇದರಿಂದ ಅವರಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇನ್ನು ತಮ್ಮ ಸಾವಿಗೂ ಕೆಲವೇ ಗಂಟೆಗೂ ಮುನ್ನ ಸಂಜಯ್ ತಮ್ಮ ‘ ಎಕ್ಸ್ ’ ಖಾತೆಯಲ್ಲಿ ಅಹಮದಾಬಾದ್‌ನಲ್ಲಿ ನಡೆದ ಏರಿಂಡಿಯಾ ವಿಮಾನ ದುರಂತಕ್ಕೆ ಸಂತಾಪ ಸೂಚಿಸಿ ಪೋಸ್ಟ್ ಮಾಡಿದ್ದರು.ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರನ್ನು 2003ರಲ್ಲಿ ಮದುವೆಯಾಗಿದ್ದ ಅವರು 2014ರಲ್ಲಿ ವಿಚ್ಛೇದನ ಪಡೆದಿದ್ದರು. ಆ ಬಳಿಕ ಪ್ರಿಯಾ ಸಚ್‌ದೇವ್ ಅವರನ್ನು ಮದುವೆಯಾಗಿದ್ದರು.
ಜೇನುನೊಣ ಕುಟುಕಿದರೆ ಏನಾಗುತ್ತದೆ?
ಜೇನು ನೊಣ ನುಂಗಿದಾಗ ನೊಣ ಗಂಟಲಿನಲ್ಲಿ ಕಚ್ಚಿದಾಗ ಕೌನಿಸ್ ಸಿಂಡ್ರೋಮ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಒಂದು ರೀತಿಯ ಅಲರ್ಜಿ ಸಮಸ್ಯೆ. ಪರಿಣಾಮ ಎದೆ ನೋವು, ಉಸಿರಾಟದ ಸಮಸ್ಯೆ, ಹೃದಯ ಸಂಬಂಧಿತ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ, ಜೇನು ಕಚ್ಚಿದಾಗ ಎಲ್ಲರಿಗೂ ಹೃದಯದಲ್ಲಿ ಊತ ಅಥವಾ ಅನಾಫಿಲ್ಯಾಕ್ಸಿಸ್ ಕಾಣಿಸಿಕೊಳ್ಳುವುದಿಲ್ಲ. ಕೆಲವರಿಗೆ ಮಾತ್ರ ಕಾಣಿಸಿಕೊಳ್ಳುತ್ತದೆ. ಈ ವೇಳೆ ಹೃದಯ ಸ್ಥಂಭನವಾಗುವ ಸಾಧ್ಯತೆಯಿರುತ್ತದೆ.