ರಸ್ತೆ ಅಪಘಾತದಲ್ಲಿ ಕರ್ನಾಟಕ ನಂ.5

| Published : Nov 01 2023, 01:01 AM IST

ಸಾರಾಂಶ

ವಿಶ್ವದ ಅತ್ಯಂತ ಬೃಹತ್‌ ಚುಟುಕು ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ಎಕ್ಸ್‌ (ಟ್ವೀಟರ್‌)ನ ಮೌಲ್ಯ ಕಳೆದ ಒಂದು ವರ್ಷದಲ್ಲಿ ಶೇ.50ರಷ್ಟು ಭಾರೀ ಇಳಿಕೆ ಕಂಡಿದೆ.
ಕಳೆದ ವರ್ಷದ 39762 ಅಪಘಾತ, 11702 ಜನರ ಸಾವು ನವದೆಹಲಿ: 2022ರಲ್ಲಿ ಕರ್ನಾಟಕದಲ್ಲಿ ಒಟ್ಟು 39,762 ರಸ್ತೆ ಅಪಘಾತಗಳು ಸಂಭವಿಸಿದ್ದು 11,702 ಮಂದಿ ಮರಣ ಹೊಂದಿದ್ದಾರೆ. ಅಪಘಾತ ಪ್ರಮಾಣದಲ್ಲಿ ಕರ್ನಾಟಕ ದೇಶದಲ್ಲಿ 5ನೇ ಸ್ಥಾನದಲ್ಲಿದ್ದರೆ, ಸಾವಿನ ಸಂಖ್ಯೆಯಲ್ಲಿ 4ನೇ ಸ್ಥಾನದಲ್ಲಿದೆ. ಅಪಘಾತಗಳ ಸಂಖ್ಯೆ ತುಸು ಹೆಚ್ಚಾಗಿದ್ದರೂ 4 ರಿಂದ 5ನೇ ಸ್ಥಾನಕ್ಕೆ ಇಳಿದಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಸಚಿವಾಲಯ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ. ಇವುಗಳ ಪೈಕಿ 13,384 ರಸ್ತೆ ಅಪಘಾತಗಳು ರಾಷ್ಟ್ರೀಯ ಹೆದ್ದಾರಿಯಲ್ಲಿಯೂ, 3046 ಅಪಘಾತಗಳು ರಾಜ್ಯ ಹೆದ್ದಾರಿಗಳಲ್ಲಿಯೂ ಸಂಭವಿಸಿದ್ದು, ಉಳಿದವು ಇತರೆ ರಸ್ತೆಗಳಲ್ಲಿ ಸಂಭವಿಸಿವೆ. ಸಾವುಗಳ ಪೈಕಿ 4164 ಮಂದಿ ರಾಷ್ಟ್ರೀಯ ಹೆದ್ದಾರಿಯಲ್ಲಿಯೂ, 3278 ಮಂದಿ ರಾಜ್ಯ ಹೆದ್ದಾರಿಗಳಲ್ಲಿಯೂ ಹಾಗೂ ಉಳಿದವರು ಇತರ ರಸ್ತೆಗಳಲ್ಲಿಯೂ ಅಸುನೀಗಿದ್ದಾರೆಂದು ವರದಿ ತಿಳಿಸಿದೆ. ಇವುಗಳ ಪೈಕಿ ಮಿತಿಮೀರಿದ ವೇಗದಲ್ಲಿ ವಾಹನ ಚಲಾಯಿಸುವಾಗ 4000 ಅಪಘಾತಗಳು ಸಂಭವಿಸಿದ್ದು, ಇದರಲ್ಲಿ 3872 ಮಂದಿ ಸಾವನ್ನಪ್ಪಿದ್ದಾರೆ. ಇನ್ನುಳಿದಂತೆ ಕುಡಿದು ವಾಹನ ಚಲಾಯಿಸುವಾಗ 18 ಮಂದಿ ಸಾವನ್ನಪ್ಪಿದ್ದರೆ, ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸಿ 144 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ ಮೊಬೈಲ್‌ನಲ್ಲಿ ಮಾತನಾಡಿಕೊಮಡು ವಾಹನ ಚಲಾಯಿಸಿ 5 ಮಂದಿ ಅಸುನೀಗಿದ್ದಾರೆ.