ಕಾಶಿ ವಿಶ್ವನಾಥ ಸನ್ನಿಧೀಲಿವಸ್ತ್ರ ಸಂಹಿತೆ: ಪುರುಷರಿಗೆಧೋತಿ, ಸ್ತ್ರೀಯರಿಗೆ ಸೀರೆ?

| Published : Oct 29 2023, 01:01 AM IST / Updated: Oct 29 2023, 01:02 AM IST

ಕಾಶಿ ವಿಶ್ವನಾಥ ಸನ್ನಿಧೀಲಿವಸ್ತ್ರ ಸಂಹಿತೆ: ಪುರುಷರಿಗೆಧೋತಿ, ಸ್ತ್ರೀಯರಿಗೆ ಸೀರೆ?
Share this Article
  • FB
  • TW
  • Linkdin
  • Email

ಸಾರಾಂಶ

ಕಾಶಿ ವಿಶ್ವನಾಥ ದೇಗುಲದಲ್ಲಿ ವಸ್ತ್ರ ಸಂಹಿತೆ ಅಳವಡಿಸುವ ಕುರಿತು ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅಧ್ಯಕ್ಷ ನಾಗೇಶ್‌ ಪಾಂಡೆ ತಿಳಿಸಿದ್ದಾರೆ
ವಾರಾಣಸಿ: ಕಾಶಿ ವಿಶ್ವನಾಥ ದೇಗುಲದಲ್ಲಿ ವಸ್ತ್ರ ಸಂಹಿತೆ ಅಳವಡಿಸುವ ಕುರಿತು ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅಧ್ಯಕ್ಷ ನಾಗೇಶ್‌ ಪಾಂಡೆ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು ‘ವಾರಾಣಸಿ ದೇಗುಲದಲ್ಲಿ ವಸ್ತ್ರಸಮಹಿತೆ ಅಳವಡಿಸಬೆಕೆಂದು ವಿವಿಧ ವರ್ಗದ ಜನರಿಂದ ಅಭಿಪ್ರಾಯ ವ್ಯಕ್ತವಾಗಿದೆ. ವಾಸ್ತವತೆಯನ್ನು ಗಮನದಲ್ಲಿಟ್ಟುಕೊಂಡು ದೇಶದ ವಿವಿಧ ದೇಗುಲಗಳಲ್ಲಿ ವಿಧಿಸಲಾಗಿರುವ ವಸ್ತ್ರಸಂಹಿತೆಯ ಕಟ್ಟುಪಾಡುಗಳನ್ನು ಪರಿಶೀಲಿಸಿದ ನಂತರ ಮುಂದಿನ ನವೆಂಬರ್‌ನಲ್ಲಿ ನಡೆಯುವ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಒಮ್ಮತ ನಿರ್ಧಾರಕ್ಕೆ ಬರಲಾಗುವುದು’ ಎಂದು ತಿಳಿಸಿದ್ದಾರೆ. ಮೂಲಗಳ ಪ್ರಕಾರ ಕಾಶಿ ವಿಶ್ವನಾಥ ದೇಗುಲದ ಗರ್ಭಗುಡಿ ಪ್ರವೇಶಕ್ಕೆ ಕುರ್ತಾ ಹಾಗೂ ಧೋತಿ ಮತ್ತು ಮಹಿಳೆಯರಿಗೆ ಸೀರೆಯನ್ನು ವಸ್ತ್ರಸಂಹಿತೆಯನ್ನಾಗಿ ಮಾಡಬಹುದು ಎಂದು ಮೂಲಗಳು ತಿಳಿಸಿವೆ.