ಸಾರಾಂಶ
ಇ.ಡಿ.ಯಿಂದ ಬಂಧನಕ್ಕೊಳಗಾದ ಉಭಯ ನಾಯಕರ ಪತ್ನಿಯರ ಮಾತುಕತೆ ನಡೆದಿದೆ.
ನವದೆಹಲಿ: ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೂರೆನ್ ಪತ್ನಿ ಕಲ್ಪನಾ ಸೊರೇನ್, ಶನಿವಾರ ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನಿತಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಕಲ್ಪನಾ, ಸುನಿತಾರನ್ನು ಅಪ್ಪಿಕೊಂಡು ಅವರಿಗೆ ಸಮಾಧಾನ ಹೇಳುವ ಯತ್ನ ಮಾಡಿದರು.
ವಿಶೇಷವೆಂದರೆ ಭ್ರಷ್ಟಾಚಾರ ಪ್ರಕರಣ ಸಂಬಂಧ ಇತ್ತೀಚೆಗೆ ಹೇಮಂತ್ ಸೊರೇನ್ ಅವರನ್ನು ಇ.ಡಿ.ಬಂಧಿಸಿತ್ತು. ಮತ್ತೊಂದೆಡೆ ದೆಹಲಿ ಲಿಕ್ಕರ್ ಹಗರಣದಲ್ಲಿ ಕೇಜ್ರಿವಾಲ್ ಅವರನ್ನು ಇ.ಡಿ ಬಂಧಿಸಿತ್ತು.