ಸಾರಾಂಶ
ದಿಲ್ಲಿ ಮದ್ಯ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ.) ನೀಡಿದ್ದ 8 ಸಮನ್ಸ್‌ಗಳಿಗೆ ಗೈರು ಹಾಜರಾಗಿದ್ದ ದಿಲ್ಲಿ ಮುಖ್ಯಮಂತ್ರಿ ಹಾಗೂ ಆಪ್ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು, ಸೋಮವಾರ ದಿಲ್ಲಿ ಜಲಮಂಡಳಿ ಹಗರಣದ ಇ.ಡಿ. ಸಮನ್ಸ್‌ಗೂ ಗೈರು ಹಾಜರಾಗಿದ್ದಾರೆ.
ನವದೆಹಲಿ: ದಿಲ್ಲಿ ಮದ್ಯ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ.) ನೀಡಿದ್ದ 8 ಸಮನ್ಸ್‌ಗಳಿಗೆ ಗೈರು ಹಾಜರಾಗಿದ್ದ ದಿಲ್ಲಿ ಮುಖ್ಯಮಂತ್ರಿ ಹಾಗೂ ಆಪ್ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು, ಸೋಮವಾರ ದಿಲ್ಲಿ ಜಲಮಂಡಳಿ ಹಗರಣದ ಇ.ಡಿ. ಸಮನ್ಸ್‌ಗೂ ಗೈರು ಹಾಜರಾಗಿದ್ದಾರೆ.
ಈ ಸಮನ್ಸ್ ಅಕ್ರಮ ಎಂದು ಕರೆದಿರುವ ಆಪ್, ಕೇಜ್ರಿವಾಲ್ ಲೋಕಸಭೆ ಚುನಾವಣಾ ಪ್ರಚಾರಕ್ಕೆ ಹೋಗುವುದನ್ನು ತಡೆಯಲು ಇಂಥ ಸಮನ್ಸ್‌ಗಳನ್ನು ಮೋದಿ ಸರ್ಕಾರವು ಇ.ಡಿ. ಮೂಲಕ ಕೊಡಿಸುತ್ತಿದೆ ಎಂದು ಕಿಡಿಕಾರಿದೆ. ಆದರೆ ಬಿಜೆಪಿ ಈ ಆರೋಪ ನಿರಾಕರಿಸಿದೆ.ದಿಲ್ಲಿ ಜಲಮಂಡಳಿಯು, ನೀರು ಪೂರೈಕೆ ಉಪಕರಣ ಅಳವಡಿಕೆಯನ್ನು ಒಂದು ನಿರ್ದಿಷ್ಟ ಕಂಪನಿಗೆ ನೀಡಿತ್ತು. ಆ ಕಂಪನಿಯು ಗುತ್ತಿಗೆ ಪಡೆಯಲು ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಭಾರಿ ಲಂಚ ನೀಡಿತ್ತು ಎಂಬುದು ಆರೋಪವಾಗಿದೆ.