ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯನ್ನು ಟೀಕಿಸಿದ್ದ ಬಂಗಾಳ ರಾಜ್ಯಾಧ್ಯಕ್ಷ ಅಧೀರ್‌ ರಂಜನ್‌ ಚೌಧರಿ ಪಕ್ಷದಿಂದ ಹೊರನಡೆಯಬಹುದು ಎಂದಿದ್ದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎರಡೇ ದಿನದಲ್ಲಿ ಯೂಟರ್ನ್‌ ಹೊಡೆದಿದ್ದು, ಅಧೀರ್ ಕಾಂಗ್ರೆಸ್‌ನ ಕೆಚ್ಚೆದೆಯ ಸೈನಿಕ ಎಂದು ಬಣ್ಣಿಸಿದ್ದಾರೆ.

ನವದೆಹಲಿ: ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯನ್ನು ಟೀಕಿಸಿದ್ದ ಬಂಗಾಳ ರಾಜ್ಯಾಧ್ಯಕ್ಷ ಅಧೀರ್‌ ರಂಜನ್‌ ಚೌಧರಿ ಪಕ್ಷದಿಂದ ಹೊರನಡೆಯಬಹುದು ಎಂದಿದ್ದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎರಡೇ ದಿನದಲ್ಲಿ ಯೂಟರ್ನ್‌ ಹೊಡೆದಿದ್ದು, ಅಧೀರ್ ಕಾಂಗ್ರೆಸ್‌ನ ಕೆಚ್ಚೆದೆಯ ಸೈನಿಕ ಎಂದು ಬಣ್ಣಿಸಿದ್ದಾರೆ.

ಕಾಂಗ್ರೆಸ್‌ ಪಕ್ಷವು 1998ರಲ್ಲಿ ಮಮತಾ ವಿಷಯದಲ್ಲಿ ಮಾಡಿದ ತಪ್ಪನ್ನು ಈಗ ಅಧೀರ್‌ ವಿಷಯದಲ್ಲಿ ಮಾಡುತ್ತಿದೆಯೇ ಎಂದು ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ, ‘ನಾನು ವೈಯಕ್ತಿಕವಾಗಿ ಯಾರ ಬಗ್ಗೆಯೂ ಮಾತನಾಡುವುದಿಲ್ಲ. ಆದರೆ ಅಧೀರ್‌ ರಂಜನ್‌ ನಮ್ಮ ಪಕ್ಷದ ಕೆಚ್ಚೆದೆಯ ಸೈನಿಕ ಮತ್ತು ಪಶ್ಚಿಮ ಬಂಗಾಳದ ನಾಯಕ’ ಎಂದು ಪ್ರತಿಕ್ರಿಯಿಸಿದರು.

ಮಮತಾ ಬ್ಯಾನರ್ಜಿ ಇತ್ತೀಚೆಗೆ ಮತ್ತೆ ಇಂಡಿಯಾ ಕೂಟ ಸೇರುವ ಹೇಳಿಕೆ ನೀಡಿದ್ದರು. ಅದನ್ನು ಅಧೀರ್‌ ವಿರೋಧಿಸಿದ್ದರು. ಇದಕ್ಕೆ ಖರ್ಗೆ ಪ್ರತಿಕ್ರಿಯಸಿ, ‘ಇದನ್ನು ಹೈಕಮಾಂಡ್‌ ನಿರ್ಧರಿಸುತ್ತೆ. ಅಧೀರ್‌ ಅಲ್ಲ. ಒಪ್ಪಿಗೆ ಇಲ್ಲದಿದ್ದರೆ ಪಕ್ಷದಿಂದ ಹೊರಹೋಗಿ’ ಎಂದಿದ್ದರು.