ಸಾರಾಂಶ
ಪಾರೋ: ಜಾಗತಿಕ ನಾಯಕರ ಪ್ರವಾಸದ ವೇಳೆ ಅಂಗರಕ್ಷಕರು, ಬಿಗಿ ಭದ್ರತಾ ವ್ಯವಸ್ಥೆ, ಹತ್ತಾರು ನಿಯಮಗಳು ಸಾಮಾನ್ಯವಾಗಿರುವ ದಿನಗಳಲ್ಲಿ ಥಾಯ್ಲೆಂಡ್ ರಾಜ, ರಾಣಿ ಸ್ವತಃ ತಾವೇ ವಿಮಾನ ಚಲಾಯಿಸಿ ಭೂತಾನ್‌ಗೆ ಭೇಟಿ ನೀಡಿ ಹುಬ್ಬೇರುವಂತೆ ಮಾಡಿದ್ದಾರೆ.
ರಾಜ- ರಾಣಿ ಸಹಸ ನೋಡಿ ಜನರ ಅಚ್ಚರಿಪಾರೋ: ಜಾಗತಿಕ ನಾಯಕರ ಪ್ರವಾಸದ ವೇಳೆ ಅಂಗರಕ್ಷಕರು, ಬಿಗಿ ಭದ್ರತಾ ವ್ಯವಸ್ಥೆ, ಹತ್ತಾರು ನಿಯಮಗಳು ಸಾಮಾನ್ಯವಾಗಿರುವ ದಿನಗಳಲ್ಲಿ ಥಾಯ್ಲೆಂಡ್ ರಾಜ, ರಾಣಿ ಸ್ವತಃ ತಾವೇ ವಿಮಾನ ಚಲಾಯಿಸಿ ಭೂತಾನ್‌ಗೆ ಭೇಟಿ ನೀಡಿ ಹುಬ್ಬೇರುವಂತೆ ಮಾಡಿದ್ದಾರೆ.
ಥಾಯ್ಲೆಂಡ್ ರಾಜ ವಜಿರಲಾಂಗ್‌ಕಾರ್ನ್ ಏ.25ರಂದು ಭೂತಾನ್‌ನ ಪಾರೋಗೆ ಭೇಟಿ ನೀಡಿದ್ದು, ತಾವೇ ವಿಮಾನ ಚಲಾಯಿಸಿದ್ದಾರೆ. ರಾಣಿ ಸುತಿದಾ ಸಹ-ಪೈಲಟ್ ಆಗಿ ನೆರವು ನೀಡಿದ್ದಾರೆ. ದಂಪತಿ ತಮ್ಮ ಬೋಯಿಂಗ್ 737-800 ವಿಮಾನದಲ್ಲಿ ವಿಶ್ವದ ಅತ್ಯಂತ ಸವಾಲಿನ ವಿಮಾನ ನಿಲ್ದಾಣವಾದ ಪಾರೋದಲ್ಲಿ ಇಳಿಯುವುದನ್ನು ಕಂಡು ವಾಯುಯಾನ ವೀಕ್ಷಕರು ಅಚ್ಚರಿಗೊಂಡಿದ್ದಾರೆ.ವಜಿರಲಾಂಗ್‌ಕಾರ್ನ್ ಈ ಹಿಂದೆ ಸೇನೆಯಲ್ಲಿ ಪೈಲಟ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಅವರು ನಾರ್ಥ್ರಾಪ್ ಎಫ್ -5, ಎಫ್ -16 ಮತ್ತು ಬೋಯಿಂಗ್ 737-400 ವಿಮಾನಗಳನ್ನು ಹಾರಿಸಲು ಅರ್ಹತೆ ಪಡೆದ ಸೇನಾ ಪೈಲಟ್. 2019ರಲ್ಲಿ ಥಾಯ್ಲೆಂಡ್ ರಾಜನಾಗಿ ಅಧಿಕಾರಕ್ಕೇರಿದ ಬಳಿಕ ಇದು ಅವರ ಮೊದಲ ಅಧಿಕೃತ ವಿದೇಶ ಭೇಟಿ.