ಚುನಾವಣಾ ಬಾಂಡ್‌ಗೆ ದೇಣಿಗೆ ನೀಡಿರುವುದು ತಮ್ಮ ವೈಯಕ್ತಿಕ ಹಣದಿಂದಲೇ ಹೊರತು ಬಯೋಕಾನ್‌ ಸಂಸ್ಥೆಯ ಹಣದಿಂದಲ್ಲ ಎಂದು ಕಿರಣ್‌ ಮಜುಂದಾರ್‌ ಶಾ ತಿಳಿಸಿದ್ದಾರೆ.

ನವದೆಹಲಿ: ವಿವಿಧ ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್‌ ಮೂಲಕ ತಾವು ನೀಡಿದ ದೇಣಿಗೆ ವೈಯಕ್ತಿಕವೇ ಹೊರತೂ ಸಂಸ್ಥೆಯ ಪರವಾಗಿ ಅಲ್ಲ ಎಂದು ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ ಸ್ಪಷ್ಟಪಡಿಸಿದ್ದಾರೆ. ಚುನಾವಣೆಗೆ ನಿಧಿ ನೀಡುವ ತತ್ವದ ಆಧಾರದಲ್ಲಿ ನಾನು ವೈಯಕ್ತಿಕ ಆಧಾರದಲ್ಲಿ ಬಾಂಡ್‌ ಖರೀದಿಸಿ ಜೆಡಿಎಸ್‌ ಮತ್ತು ಇತರೆ ಪಕ್ಷಗಳಿಗೆ ದೇಣಿಗೆ ನೀಡಿದ್ದೆ ಎಂಬುದಾಗಿ ತಿಳಿಸಿದ್ದಾರೆ.