ಎಲ್ಲರನ್ನು ಇಸ್ಲಾಂಗೆ ಮತಾಂತರ ಮಾಡಿ: ಕೋಲ್ಕತಾ ಮೇಯರ್‌ ಕರೆ

| Published : Jul 08 2024, 12:30 AM IST / Updated: Jul 08 2024, 06:21 AM IST

ಎಲ್ಲರನ್ನು ಇಸ್ಲಾಂಗೆ ಮತಾಂತರ ಮಾಡಿ: ಕೋಲ್ಕತಾ ಮೇಯರ್‌ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

 ಶೀಘ್ರವೇ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗಲಿದ್ದಾರೆ ಎಂಬ ಅಲಹಾಬಾದ್‌ ಹೈಕೋರ್ಟ್‌ನ ಇತ್ತೀಚಿನ ಎಚ್ಚರಿಕೆ ಬೆನ್ನಲ್ಲೇ, ಕೋಲ್ಕತಾ ಮಹಾನಗರ ಪಾಲಿಕೆ ಮೇಯರ್‌ ಫಿರ್ಹಾದ್‌ ಹಕೀಂ, ಅನ್ಯಧರ್ಮೀಯರನ್ನೆಲ್ಲಾ ಇಸ್ಲಾಂಗೆ ಮತಾಂತರ ಮಾಡಿ ಎಂದು ಬಹಿರಂಗವಾಗಿಯೇ ಕರೆ ನೀಡಿದ್ದಾರೆ.

ಕೋಲ್ಕತಾ: ದೇಶವ್ಯಾಪಿ ನಡೆಯುತ್ತಿರುವ ಮತಾಂತರ ಪ್ರಕ್ರಿಯೆ ಸ್ಥಗಿತಗೊಳಿಸದೇ ಹೋದರೆ, ಶೀಘ್ರವೇ ಬಹುಸಂಖ್ಯಾತರು ಅಲ್ಪಸಂಖ್ಯಾತರಾಗಲಿದ್ದಾರೆ ಎಂಬ ಅಲಹಾಬಾದ್‌ ಹೈಕೋರ್ಟ್‌ನ ಇತ್ತೀಚಿನ ಎಚ್ಚರಿಕೆ ಬೆನ್ನಲ್ಲೇ, ಕೋಲ್ಕತಾ ಮಹಾನಗರ ಪಾಲಿಕೆ ಮೇಯರ್‌ ಫಿರ್ಹಾದ್‌ ಹಕೀಂ, ಅನ್ಯಧರ್ಮೀಯರನ್ನೆಲ್ಲಾ ಇಸ್ಲಾಂಗೆ ಮತಾಂತರ ಮಾಡಿ ಎಂದು ಬಹಿರಂಗವಾಗಿಯೇ ಕರೆ ನೀಡಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಪ್ತ ಮತ್ತು ಟಿಎಂಸಿ ನಾಯಕನೂ ಆಗಿರುವ ಹಕೀಂ ಇಲ್ಲಿ ಆಯೋಜಿಸಿದ್ದ ‘ಅಖಿಲ ಭಾರತ ಕುರಾನ್ ಸ್ಪರ್ಧೆ’ ವೇಳೆ ಮಾತನಾಡಿ ‘ಇಸ್ಲಾಂ ಧರ್ಮದಲ್ಲಿ ಜನಿಸದವರು ಅದೃಷ್ಟಹೀನರು. ಅವರನ್ನು ನಾವು ಇಸ್ಲಾಂಗೆ ಕರೆತರಬೇಕು’ ಎಂದು ಮತಾಂತರಕ್ಕೆ ಕರೆ ನೀಡಿದ್ದಾರೆ.

ಅವರ ಈ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಟಿಎಂಸಿಯ ತುಷ್ಟೀಕರಣ ರಾಜಕೀಯವನ್ನು ಟೀಕಿಸಿದ್ದಾರೆ. ‘ಟಿಎಂಸಿ ತುಷ್ಟೀಕರಣ ರಾಜಕೀಯವನ್ನು ಅನುಸರಿಸುತ್ತಿದೆ ಎಂಬುದು ಜಗಜ್ಜಾಹಿರ. ಸತತ ಚುನಾವಣಾ ಜಯಗಳು ಪಕ್ಷವನ್ನು ಹಿಂದೆಂದಿಗಿಂತಲೂ ಹೆಚ್ಚು ಧೈರ್ಯಶಾಲಿ ಮತ್ತು ಅಹಂಕಾರಿಯನ್ನಾಗಿ ಮಾಡುತ್ತಿದೆ. ಷರಿಯಾ ಕಾನೂನಿನಂತೆ ಮಹಿಳೆಯೊಬ್ಬಳ ಥಳಿತಕ್ಕೆ ಹಮಿದುರ್ ರಹಮಾನ್ ನೀಡಿದ ಸಮರ್ಥನೆ ಟಿಎಂಸಿಯ ಕಾರ್ಯಸೂಚಿಯನ್ನು ತೋರಿಸುತ್ತಿವೆ. ಹೀಗೇ ಮುಂದುವರಿದರೆ ದೀದಿಯ ಸ್ಫೂರ್ತಿಯಿಂದ ಬಂಗಾಳ ಮುಸ್ಲಿಂ ರಾಜ್ಯವಾಗುವ ದಿನ ದೂರವಿಲ್ಲ’ ಎಂದು ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.