ವೈದ್ಯೆ ಮೇಲೆ ರೇಪ್‌ಗೂ ಮುನ್ನ ಮತ್ತೊಬ್ಬಾಕೆಗೆ ಸಂಜಯ್‌ ರಾಯ್ ಕಿರುಕುಳ : ಮತ್ತೊಂದು ನೀಚ ಕೃತ್ಯ ಹೊರಗೆ

| Published : Aug 27 2024, 01:30 AM IST / Updated: Aug 27 2024, 05:00 AM IST

ವೈದ್ಯೆ ಮೇಲೆ ರೇಪ್‌ಗೂ ಮುನ್ನ ಮತ್ತೊಬ್ಬಾಕೆಗೆ ಸಂಜಯ್‌ ರಾಯ್ ಕಿರುಕುಳ : ಮತ್ತೊಂದು ನೀಚ ಕೃತ್ಯ ಹೊರಗೆ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಬಂಗಾಳದ ವೈದ್ಯೆ ರೇಪ್ ಕೇಸಿನ ಆರೋಪಿ ಸಂಜಯ್‌ ರಾಯ್ ಮತ್ತೊಂದು ನೀಚ ಕೃತ್ಯ ಹೊರಬಿದ್ದಿದೆ.

ಕೋಲ್ಕತಾ: ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಬಂಗಾಳದ ವೈದ್ಯೆ ರೇಪ್ ಕೇಸಿನ ಆರೋಪಿ ಸಂಜಯ್‌ ರಾಯ್ ಮತ್ತೊಂದು ನೀಚ ಕೃತ್ಯ ಹೊರಬಿದ್ದಿದೆ. ಆ.9 ರಂದು ವೈದ್ಯೆ ಮೇಲೆ ಪೈಶಾಚಿಕತೆ ಮೆರೆಯುವ ಮುನ್ನ ಮತ್ತೊಂದು ಮಹಿಳೆಗೆ ಕಿರುಕುಳ ನೀಡಿದ್ದ ಹಾಗೂ ತನ್ನ ಗರ್ಲ್‌ಫ್ರೆಂಡ್‌ಗೆ ಕರೆ ಮಾಡಿ ಬೆತ್ತಲೆ ಚಿತ್ರ ಕಳಿಸು ಎಂದು ಕೋರಿದ್ದ ಎನ್ನುವ ವಿಚಾರ ಸಿಬಿಐ ಮೂಲಗಳಿಂದ ತಿಳಿದು ಬಂದಿದೆ.

ಸಿಬಿಐ ಅಧಿಕಾರಿಗಳ ವಿಚಾರಣೆ ವೇಳೆ ರಾಯ್‌ ಅಂದು ವೈದ್ಯೆ ಮೇಲೆ ಅತ್ಯಾಚಾರ ಮಾಡಿದ ರಾತ್ರಿ ಏನಾಯ್ತು ಎನ್ನುವುದನ್ನು ಬಾಯಿ ಬಿಟ್ಟಿದ್ದಾನೆ. ಆ ದಿನ ಆತ ವೇಶ್ಯಯರ ತಾಣವಾದ 2 ರೆಡ್‌ಲೈಟ್‌ ಏರಿಯಾಗಳಿಗೆ ಹೋಗಿದ್ದ. ಆದರೆ ಅಲ್ಲಿ ಆತನಿಗೆ ಲೈಂಗಿಕ ಕ್ರಿಯೆ ನಡೆಸುವುದಕ್ಕೆ ಸಾಧ್ಯವಾಗಿರಲಿಲ್ಲ. ಹೀಗಾಗಿ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬಳಿಗೆ ಕಿರುಕುಳ ನೀಡಿದ್ದ. ಈ ಘಟನೆ ಸಿಸಿಟೀವಿಯಲ್ಲಿ ಸೆರೆಯಾಗಿದೆ. ಅಲ್ಲದೇ ಅದೇ ದಿನ ತನ್ನ ಪ್ರೇಯಸಿಗೆ ಕರೆ ಮಾಡಿ ಬೆತ್ತಲೆ ಚಿತ್ರಗಳನ್ನು ಕಳುಹಿಸಲು ಹೇಳಿದ್ದ. ಬಳಿಕ ಆಸ್ಪತ್ರೆಗೆ ಆಗಮಿಸಿ ರೇಪ್‌ ಮಾಡಿದ್ದ. ಇದನ್ನು ಖುದ್ದು ರಾಯ್‌ ಸಿಬಿಐಗೆ ಹೇಳಿದ್ದಾನೆ ಎಂದು ಮೂಲಗಳು ಹೇಳಿವೆ.

ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ 11 ವರ್ಷದ ಪುತ್ರಿಗೆ ರೇಪ್ ಬೆದರಿಕೆ

ಕೋಲ್ಕತಾ: ವೈದ್ಯೆ ರೇಪ್ ಕೇಸ್‌ ವಿವಾದ ತೀವ್ರಗೊಂಡಿರುವ ನಡುವೆಯೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೋದರಳಿಯ ಹಾಗೂ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿಯ 11 ವರ್ಷದ ಪುತ್ರಿಗೆ ಅತ್ಯಾಚಾರದ ಬೆದರಿಕೆ ಬಂದಿದ್ದು, ರೇಪ್ ಮಾಡಿದವರಿಗೆ 10 ಕೋಟಿ ರು. ನೀಡುವುದಾಗಿ ಘೋಷಣೆಯಾಗಿದೆ.ಜನರ ಗುಂಪಿನಲ್ಲಿದ್ದ ಓರ್ವ ವ್ಯಕ್ತಿ ಅಭಿಷೇಕ್ ಬ್ಯಾನರ್ಜಿ ಅಪ್ರಾಪ್ತ ಪುತ್ರಿಯನ್ನು ಅತ್ಯಾಚಾರ ಮಾಡಬೇಕು ಎಂಬುದಾಗಿ ಹೇಳುತ್ತಾನೆ. ಅಲ್ಲದೇ ರೇಪ್ ಮಾಡುವ ವ್ಯಕ್ತಿಗೆ 10 ಕೋಟಿ ರು. ನೀಡುವುದಾಗಿ ಘೋಷಿಸುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮಕ್ಕಳ ಹಕ್ಕುಗಳ ಆಯೋಗ, ‘ಇಂತಹ ಕೀಳು ಮಟ್ಟದ ಹೇಳಿಕೆಗಳಿಂದ ಬಾಲಕಿಯ ಸುರಕ್ಷತೆಗೆ ಅಪಾಯ ಎದುರಾಗುತ್ತದೆ’ ಎಂದು ಅಭಿಪ್ರಾಯ ಪಟ್ಟಿದ್ದು ಸ್ವಯಂಪ್ರೇರಿತ ಕೇಸ್‌ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.