ಗೋವಾ ಬದಲು ಅಯೋಧ್ಯೆಗೆ ಹನಿಮೂನ್‌: ಪತ್ನಿಯಿಂದ ಡೈವೋರ್ಸ್‌ ಕೋರಿ ಅರ್ಜಿ

| Published : Jan 26 2024, 01:46 AM IST / Updated: Jan 26 2024, 07:32 AM IST

ಗೋವಾ ಬದಲು ಅಯೋಧ್ಯೆಗೆ ಹನಿಮೂನ್‌: ಪತ್ನಿಯಿಂದ ಡೈವೋರ್ಸ್‌ ಕೋರಿ ಅರ್ಜಿ
Share this Article
  • FB
  • TW
  • Linkdin
  • Email

ಸಾರಾಂಶ

ಗೋವಾಗೆ ಬದಲಾಗಿ ಅಯೋಧ್ಯೆ ಮತ್ತು ಕಾಶಿಗೆ ತನ್ನ ಪತಿ ಮಧುಚಂದ್ರಕ್ಕೆ ಕರೆದೊಯ್ದಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬಳು ಡೈವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾಳೆ.

ಭೋಪಾಲ್‌: ಗಂಡ ಹನಿಮೂನ್‌ಗೆ ಗೋವಾದ ಬದಲು ಅಯೋಧ್ಯೆಗೆ ಕರೆದೊಯ್ದಿದ್ದಾನೆ ಎಂದು ಆರೋಪಿಸಿ 5 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಸ್ಥಳೀಯ ಮಹಿಳೆಯೊಬ್ಬರು ಡೈವೋರ್ಸ್‌ ಕೋರಿದ್ದಾರೆ.

ಮೊದಲು ಗಂಡ ಮೊದಲು ಗೋವಾಗೆ ಹನಿಮೂನ್‌ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದರು.

ಆದರೆ ಹೊರಡಲು ಒಂದು ದಿನ ಬಾಕಿ ಉಳಿದಿರುವಾಗ ಅವರ ತಾಯಿ ಕೋರಿಕೆ ಮೇರೆಗೆ ಕುಟುಂಬ ಸದಸ್ಯರೆಲ್ಲರೂ ಗೋವಾಗೆ ಬದಲಾಗಿ ಅಯೋಧ್ಯೆ ಮತ್ತು ವಾರಾಣಸಿಗೆ ಕರೆದೊಯ್ದು ತನ್ನ ಕನಸನ್ನು ನುಚ್ಚುನೂರು ಮಾಡಿದ್ದಾರೆ ಎಂದು ಪತ್ನಿ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದ್ದಾಳೆ.