ಸೂಡಾನ್‌: ಭೂಕುಸಿತಕ್ಕೆ ಹಳ್ಳಿ ಪೂರ್ಣಭೂಸಮಾಧಿ, 1000ಕ್ಕೂ ಹೆಚ್ಚು ಸಾವು

| Published : Sep 03 2025, 01:01 AM IST

ಸೂಡಾನ್‌: ಭೂಕುಸಿತಕ್ಕೆ ಹಳ್ಳಿ ಪೂರ್ಣಭೂಸಮಾಧಿ, 1000ಕ್ಕೂ ಹೆಚ್ಚು ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಸೂಡಾನ್‌ನ ಪಶ್ಚಿಮ ಭಾಗವಾದ ಡರ್‌ಫುರ್‌ನಲ್ಲಿ ಭಾರೀ ಮಳೆಯಿಂದಾಗಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಒಂದಿಡೀ ಹಳ್ಳಿಯೇ ಭೂಸಮಾಧಿಯಾಗಿದ್ದು 1000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್‌ ಇಡೀ ಗ್ರಾಮದ ಜನರ ಪೈಕಿ ಒಬ್ಬ ಮಾತ್ರ ಬದುಕುಳಿದಿದ್ದಾನೆ.

ಆಹಾರವಿಲ್ಲದೇ ಹುಲ್ಲು ತಿನ್ನುವ ದೇಶದಲ್ಲಿ ದುರಂತಕೈರೋ: ಸೂಡಾನ್‌ನ ಪಶ್ಚಿಮ ಭಾಗವಾದ ಡರ್‌ಫುರ್‌ನಲ್ಲಿ ಭಾರೀ ಮಳೆಯಿಂದಾಗಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಒಂದಿಡೀ ಹಳ್ಳಿಯೇ ಭೂಸಮಾಧಿಯಾಗಿದ್ದು 1000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್‌ ಇಡೀ ಗ್ರಾಮದ ಜನರ ಪೈಕಿ ಒಬ್ಬ ಮಾತ್ರ ಬದುಕುಳಿದಿದ್ದಾನೆ.

ಮರ್ರಾಹ್‌ ಬೆಟ್ಟದ ತಪ್ಪಲಿನಲ್ಲಿ ಬರುವ ತರಾಸಿನ್‌ ಗ್ರಾಮದ ಆಸುಪಾಸಿನಲ್ಲಿ ಹಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಅದರ ಬೆನ್ನಲ್ಲೇ ಸೋಮವಾರ ಸಂಜೆ ವೇಳೆಗೆ ಭಾರೀ ಭೂಕುಸಿತ ಸಂಭವಿಸಿದೆ. ಭೂಕುಸಿತದ ಪರಿಣಾಮಕ್ಕೆ ಇಡೀ ಹಳ್ಳಿಯೇ ಭೂಸಮಾಧಿಯಾಗಿದ್ದು, ಹಳ್ಳಿಯ 1000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಸೇನೆ ಮತ್ತು ಅರೆಸೇನಾಪಡೆಯ ಸಂಘರ್ಷಕ್ಕಿ ಸಿಕ್ಕಿರುವ ಆಫ್ರಿಕಾದ ಈ ದೇಶ ಇದೀಗ ಪರಿಹಾರ ಕಾರ್ಯಗಳಿಗಾಗಿ ಅಂತಾರಾಷ್ಟ್ರೀಯ ಸಮುದಾಯದ ನೆರವು ಯಾಚಿಸಿದೆ. 2023ರಲ್ಲಿ ಎರಡೂ ಬಣಗಳ ನಡುವೆ ಆರಂಭವಾದ ಆಂತರಿಕ ಸಂಘರ್ಷ ಇದುವರೆಗೂ 40000ಕ್ಕೂ ಹೆಚ್ಚು ಜನರನ್ನು ಬಲಿಪಡೆದಿದ್ದು, 14 ಲಕ್ಷ ಜನರು ತಮ್ಮ ಮನೆ ತೊರೆಯುವಂತೆ ಮಾಡಿದೆ. ತಿನ್ನಲು ಆಹಾರವಿಲ್ಲದೇ ಜನತೆ ಹುಲ್ಲು ತಿನ್ನುವ ಪರಿಸ್ಥಿತಿ ಇಲ್ಲಿದೆ.