ಸಾರಾಂಶ
2,000 ರು. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಂಡಿರುವ ಆರ್‌ಬಿಐ, ಅವುಗಳನ್ನು ಸಾರ್ವಜನಿಕ ಬ್ಯಾಂಕುಗಳಲ್ಲಿ ಬದಲಾಯಿಸಿಕೊಳ್ಳಲು ನೀಡಿದ್ದ ಗಡುವು ಅ.7ರ ಶನಿವಾರ ಕೊನೆಯಾಗಲಿದೆ.
ನವದೆಹಲಿ: 2,000 ರು. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಂಡಿರುವ ಆರ್‌ಬಿಐ, ಅವುಗಳನ್ನು ಸಾರ್ವಜನಿಕ ಬ್ಯಾಂಕುಗಳಲ್ಲಿ ಬದಲಾಯಿಸಿಕೊಳ್ಳಲು ನೀಡಿದ್ದ ಗಡುವು ಅ.7ರ ಶನಿವಾರ ಕೊನೆಯಾಗಲಿದೆ. ಆದರೆ ಶನಿವಾರದ ಬಳಿಕವೂ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆಯಾದರೂ ಅದಕ್ಕೆ ಆರ್‌ಬಿಐ ಕಚೇರಿಗೇ ಹೋಗಬೇಕು. ಅ.7ರ ನಂತರ ಯಾವುದೇ ಬ್ಯಾಂಕುಗಳಲ್ಲಿ 2,000 ರು. ನೋಟುಗಳನ್ನು ಬದಲಾಯಿಸುವುದಾಗಲೀ ಠೇವಣಿ ಮಾಡುವುದಾಗಲೀ ಸಾಧ್ಯವಿಲ್ಲ.
ದೇಶದಲ್ಲಿರುವ 19 ಆರ್‌ಬಿಐ ಕಚೇರಿಯಲ್ಲಿ ಮಾತ್ರ ನೋಟು ಬದಲಾವಣೆಗೆ ಅವಕಾಶವಿದೆ. ಮೇ.19ರಂದು 2,000 ರು. ನೋಟುಗಳನ್ನು ಚಲಾವಣೆಯಿಂದ ಹಿಂಪಡೆದುಕೊಂಡಾಗಿನಿಂದ ಈವರೆಗೆ 3.43 ಲಕ್ಷ ಕೋಟಿ ರು. ಬ್ಯಾಂಕ್‌ಗೆ ಮರಳಿವೆ. ಅಲ್ಲದೇ 2,000 ರು. ಮುಕಬೆಲೆಯ ಇನ್ನೂ 12,000 ಕೋಟಿ ರು. ಸಾರ್ವಜನಿಕರ ಬಳಿಯಿದೆ ಎಂದು ಆರ್‌ಬಿಐ ತಿಳಿಸಿದೆ.