ಸಾರಾಂಶ
ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಟಿಎಂಸಿ ಸಂಸದ ಕಲ್ಯಾನ್ ಬ್ಯಾನರ್ಜಿ ‘ಲೇಡಿ ಕಿಲ್ಲರ್’ ಎಂದು ಕರೆದಿದ್ದು ಲೋಕಸಭೆಯಲ್ಲಿ ಕೋಲಾಹಲಕ್ಕೆ ನಾಂದಿ ಹಾಡಿತು ಹಾಗೂ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ನವದೆಹಲಿ: ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಟಿಎಂಸಿ ಸಂಸದ ಕಲ್ಯಾನ್ ಬ್ಯಾನರ್ಜಿ ‘ಲೇಡಿ ಕಿಲ್ಲರ್’ ಎಂದು ಕರೆದಿದ್ದು ಲೋಕಸಭೆಯಲ್ಲಿ ಕೋಲಾಹಲಕ್ಕೆ ನಾಂದಿ ಹಾಡಿತು ಹಾಗೂ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.ಕೋವಿಡ್ ಲಸಿಕೆ ಕುರಿತ ಚರ್ಚೆ ವೇಳೆ, ‘ಮೋದಿ ಸರ್ಕಾರ ಕೋವಿಡ್ ಲಸಿಕೆ ವಿತರಣೆ ಮಾಡಲಿಲ್ಲ’ ಎಂದು ಆರೋಪಿಸಿದರು. ಆಗ ಇದನ್ನು ವಿರೋಧಿಸಿದ ಕೇಂದ್ರ ಸಚಿವ ನಿತ್ಯಾನಂದ ರಾಯ್, ‘ಮೋದಿ ಜಗತ್ತಿಗೇ ಲಸಿಕೆ ನೀಡಿ ವಿಶ್ವಬಂಧು ಎನ್ನಿಸಿಕೊಂಡರು’ ಎಂದರು. ಅವರಿಗೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಬೆಂಬಲ ನೀಡಿದರು.
ಆಗ ಬ್ಯಾನರ್ಜಿ ಅವರು ಸಿಂಧಿಯಾರನ್ನು ಉಲ್ಲೇಖಿಸಿ, ‘ನೀವು ಸುಂದರವಾಗಿ ಕಾಣುವ ವ್ಯಕ್ತಿ. ಆದರೆ ನೀವು ಖಳನಾಯಕರಾಗಬಹುದು. ನೀವೊಬ್ಬ ಲೇಡಿ ಕಿಲ್ಲರ್’ ಎಂದು ಕಿಚಾಯಿಸಿದರು.ಆಗ ಕೋಲಾಹಲ ಉಂಟಾಗಿ ಸಿಂಧಿಯಾ ಕುಪಿತರಾದರು. ಬ್ಯಾನರ್ಜಿ ಕ್ಷಮೆ ಕೇಳಿದರು ಹಾಗೂ ಕಡತದಿಂದ ಬ್ಯಾನರ್ಜಿ ಆಡಿದ ಮಾತನ್ನು ಸ್ಪೀಕರ್ ತೆಗೆದು ಹಾಕಿದರು. ಆದರೂ ಸಿಂಧಿಯಾ ಕ್ಷಮೆ ಸ್ವೀಕರಿಸಲು ನಿರಾಕರಿಸಿದರು. ಕೊನೆಗೆ ಕಲಾಪ ಮುಂದೂಡಲಾಯಿತು.
ಬ್ಯಾನರ್ಜಿ ಅಮಾನತಿಗೆ ಆಗ್ರಹ:ಮಹಿಳೆಯರ ಬಗ್ಗೆ ಪದೇ ಪದೇ ಕೀಳು ಪದ ಬಳಸುವ ಕಲ್ಯಾಣ್ ಬ್ಯಾನರ್ಜಿ ಅವರನ್ನು ಪ್ರಸಕ್ತ ಅಧಿವೇಶನದ ಉಳಿದ ಭಾಗಕ್ಕೆ ಅಮಾನತುಗೊಳಿಸುವಂತೆ ಬಿಜೆಪಿ ಮಹಿಳಾ ಸಂಸದರು ಒತ್ತಾಯಿಸಿದ್ದಾರೆ.