ಸಾರಾಂಶ
ನವದೆಹಲಿ: ದಿಲ್ಲಿಯ ಸುಮಾರು 250ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು ರಷ್ಯಾದಿಂದ ಎಂದು ಗೊತ್ತಾಗಿರುವ ಹಿನ್ನೆಲೆಯಲ್ಲಿ, ರಷ್ಯಾದಲ್ಲಿನ ಕಿಡಿಗೇಡಿಗಳ ಶೋಧಕ್ಕೆ ದಿಲ್ಲಿ ಪೊಲೀಸರು ಮುಂದಾಗಿದ್ದಾರೆ. ಹೀಗಾಗಿ ರಷ್ಯಾ ಸರ್ಕಾರಕ್ಕೆ ದಿಲ್ಲಿ ಪೊಲೀಸರು, ಕಿಡಿಗೇಡಿಗಳ ಪತ್ತೆಗೆ ನೆರವಾಗುವಂತೆ ಮನವಿ ಮಾಡಿದ್ದಾರೆ.sawariim@mail.ru ಎಂಬ ಇ-ಮೇಲ್‌ನಿಂದ ದಿಲ್ಲಿ ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ ಎಂಬ ಸಂದೇಶ ಬಂದಿತ್ತು. ಇದು ರಷ್ಯಾದಿಂದ ರವಾನೆಯಾಗಿದೆ ಎಂದು ತನಿಖೆಯಿಂದ ಗೊತ್ತಾಗಿದೆ. ಹೀಗಾಗಿ ರಷ್ಯಾ ಗೃಹ ಇಲಾಖೆಯ ನ್ಯಾಷನಲ್ ಸೆಂಟ್ರಲ್ ಬ್ಯೂರೋಗೆ (ಎನ್‌ಸಿಬಿ) ದಿಲ್ಲಿ ಪೊಲೀಸರು, ಈ ಇ-ಮೇಲ್ ಕಳಿಸಿದವರ ಪತ್ತೆಗೆ ನೆರವಾಗಿ ಎಂದು ಕೋರಿದ್ದಾರೆ.
ಭೀತಿ ಸೃಷ್ಟಿ ಉದ್ದೇಶ- ಎಫ್‌ಐಆರ್:ದೆಹಲಿಯ ಸುಮಾರು 250 ಶಾಲೆಗಳು ಸ್ವೀಕರಿಸಿದ ಬಾಂಬ್ ಹುಸಿ ಇಮೇಲ್‌ಗಳ ಉದ್ದೇಶವು ‘ಸಾಮೂಹಿಕ ಭೀತಿ ಸೃಷ್ಟಿಸುವುದು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವುದು’ ಎಂದು ದೆಹಲಿ ಪೊಲೀಸರ ವಿಶೇಷ ಸೆಲ್ ದಾಖಲಿಸಿದ ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ದಿಲ್ಲಿಯ ಸುಮಾರು 250ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು ರಷ್ಯಾದಿಂದ ಎಂದು ಗೊತ್ತಾಗಿರುವ ಹಿನ್ನೆಲೆಯಲ್ಲಿ, ರಷ್ಯಾದಲ್ಲಿನ ಕಿಡಿಗೇಡಿಗಳ ಶೋಧಕ್ಕೆ ದಿಲ್ಲಿ ಪೊಲೀಸರು ಮುಂದಾಗಿದ್ದಾರೆ.ಈ ನಡುವೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಬುಧವಾರ ದಿಲ್ಲಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕ್ಷೀಣಿಸಿತ್ತು. ಬಾಂಬ್ ಬೆದರಿಕೆ ಸ್ವೀಕರಿಸದ ಶಾಲೆಗಳಲ್ಲೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರಲಿಲ್ಲ.