ಚುನಾವಣೆ ನಡೆದು 11 ದಿನಗಳ ಬಳಿಕ ಮತಪ್ರಮಾಣ ಘೋಷಣೆ

| Published : May 01 2024, 01:15 AM IST

ಸಾರಾಂಶ

ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆದು 11 ದಿನಗಳ ಬಳಿಕ ಚುನಾವಣಾ ಆಯೋಗ ಮತದಾನದ ಅಧಿಕೃತ ಪ್ರಮಾಣವನ್ನು ಪ್ರಕಟಿಸಿದೆ.

ನವದೆಹಲಿ: ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಡೆದು 11 ದಿನಗಳ ಬಳಿಕ ಚುನಾವಣಾ ಆಯೋಗ ಮತದಾನದ ಅಧಿಕೃತ ಪ್ರಮಾಣವನ್ನು ಪ್ರಕಟಿಸಿದೆ. ಮೊದಲ ಹಂತದಲ್ಲಿ ಶೇ.66.14, ಎರಡನೇ ಹಂತದಲ್ಲಿ ಶೇ.66.71ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ. ಈ ಪೈಕಿ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು ಶೇ.69.56ರಷ್ಟು ಮತದಾನವಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕನಿಷ್ಠ ಶೇ.53.17ರಷ್ಟು ಮಾತ್ರ ಮತದಾನವಾಗಿದೆ.

ವಿಪಕ್ಷಗಳಿಂದ ಟೀಕಾಸ್ತ್ರ:

ಮೊದಲ ಹಂತದ ಚುನಾವಣೆ ನಡೆದು 11 ದಿನಗಳ ಬಳಿಕ ಮತದಾನ ಪ್ರಮಾಣವನ್ನು ಪ್ರಕಟಿಸಿದ್ದಕ್ಕೆ ವಿಪಕ್ಷಗಳಾದ ಟಿಎಂಸಿ, ಕಾಂಗ್ರೆಸ್‌, ಸಿಪಿಎಂ ಸೇರಿ ಹಲವು ವಿಪಕ್ಷಗಳು ಕಿಡಿಕಾರಿವೆ. ಬಿಜೆಪಿ ಹಾಗೂ ಪ್ರಧಾನಿ ಮೋದಿ ಸಂಸತ್ತಿನಲ್ಲಿ ಕಾನೂನನ್ನು ಬದಲಿಸಿ ಚುನಾವಣಾ ಆಯೋಗವನ್ನು ನಿರ್ನಾಮ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿವೆ.