5ನೇ ಹಂತ: ಶೇ.57ರಷ್ಟು ಮತದಾನ

| Published : May 21 2024, 12:40 AM IST / Updated: May 21 2024, 05:28 AM IST

ಸಾರಾಂಶ

8 ರಾಜ್ಯಗಳ 49 ಲೋಕಸಭಾ ಕ್ಷೇತ್ರ ಮತ್ತು ಒಡಿಶಾ ವಿಧಾನಸಭೆಯ 35 ಕ್ಷೇತ್ರಗಳಿಗೆ ಸೋಮವಾರ ಬಹುತೇಕ ಶಾಂತಿಯುತ ಮತದಾನ ನಡೆಯಿತು.

ನವದೆಹಲಿ: 8 ರಾಜ್ಯಗಳ 49 ಲೋಕಸಭಾ ಕ್ಷೇತ್ರ ಮತ್ತು ಒಡಿಶಾ ವಿಧಾನಸಭೆಯ 35 ಕ್ಷೇತ್ರಗಳಿಗೆ ಸೋಮವಾರ ಬಹುತೇಕ ಶಾಂತಿಯುತ ಮತದಾನ ನಡೆಯಿತು. ಪಶ್ಚಿಮ ಬಂಗಾಳ ಸೇರಿ ರಾಜ್ಯಗಳಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ಹಿಂಸಾಚಾರ, ಇವಿಎಂ ಕೈಕೊಟ್ಟ ಘಟನೆ ಹೊರತುತಪಡಿಸಿದರೆ ಉಳಿದಂತೆ ದೇಶವ್ಯಾಪಿ ಮತದಾನ ಸುಸೂತ್ರವಾಗಿ ನಡೆಯಿತು.

ಪಶ್ಚಿಮ ಬಂಗಾಳದಲ್ಲಿ ಗರಿಷ್ಠ ಶೇ.73.ರಷ್ಟು ಮತದಾನವಾಗಿದ್ದರೆ, ಮಹಾರಾಷ್ಟ್ರದಲ್ಲಿ ಅತ್ಯಂತ ಕನಿಷ್ಠ ಶೇ.48.88ರಷ್ಟು ಮತ ಚಲಾವಣೆಯಾಗಿದೆ.ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಶೇ.54ರಷ್ಟು ಮತಚಲಾವಣೆಯಾಗಿದೆ. ಇದು ಇತಿಹಾಸದಲ್ಲೇ 2ನೇ ಗರಿಷ್ಠವಾಗಿದೆ. 1984ರಲ್ಲಿ ಶೇ.58.84ರಷ್ಟು ಚಲಾವಣೆಯಾಗಿದ್ದು ಈವರೆಗಿನ ಗರಿಷ್ಠವಾಗಿದೆ.

5ನೇ ಹಂತದ ಮುಕ್ತಾಯದೊಂದಿಗೆ 23 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 379 ಲೋಕಸಭಾ ಸ್ಥಾನಗಳಿಗೆ ಚುನಾವಣೆ ಮುಗಿದಂತೆ ಆಗಿದೆ. ಇನ್ನ ಉಳಿದ 2 ಹಂತದಲ್ಲಿ 64 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಎಲ್ಲೆಲ್ಲಿ ಚುನಾವಣೆ? ಉತ್ತರ ಪ್ರದೇಶ (14), ಮಹಾರಾಷ್ಟ್ರ (13), ಪಶ್ಚಿಮ ಬಂಗಾಳ (7), ಬಿಹಾರ (5), ಒಡಿಶಾ (5), ಜಾರ್ಖಂಡ್‌ (3), ಲಡಾಖ್‌ (1 ), ಜಮ್ಮು ಮತ್ತು ಕಾಶ್ಮೀರ (1)

 ಪ್ರಮುಖ ಅಭ್ಯರ್ಥಿಗಳು ರಾಹುಲ್ ಗಾಂಧಿ, ಸ್ಮೃತಿ ಇರಾನಿ, ರಾಜ್‌ನಾಥ್‌ ಸಿಂಗ್‌, ಒಮರ್‌ ಅಬ್ದುಲ್ಲಾ, ಪಿಯೂಷ್‌ ಗೋಯಲ್‌, ರಾಜೀವ್‌ ಪ್ರತಾಪ್ ರೂಢಿ, ರೋಹಿಣಿ ಅಚಾರ್ಯ, ಚಿರಾಗ್ ಪಾಸ್ವಾನ್‌.

5ನೇ ಹಂತದ ಮತದಾನ ಪ್ರಮಾಣ2019ಶೇ.61.82

2024ಶೇ. 57.00