ಸಾರಾಂಶ
ಈಗಾಗಲೇ ಮುಕ್ತಾಯಗೊಂಡ ಲೋಕಸಭೆ ಚುನಾವಣೆಯ 6 ಹಂತಗಳ ಪೈಕಿ 4ನೇ ಹಂತದಲ್ಲಿ ಅತ್ಯಧಿಕ ಮತ್ತು 5ನೇ ಹಂತದಲ್ಲಿ ಅತಿ ಕಡಿಮೆ ಮತದಾನವಾಗಿದೆ ಎಂದು ಮಂಗಳವಾರ ಚುನಾವಣಾ ಆಯೋಗ ತಿಳಿಸಿದೆ.
ನವದೆಹಲಿ: ಈಗಾಗಲೇ ಮುಕ್ತಾಯಗೊಂಡ ಲೋಕಸಭೆ ಚುನಾವಣೆಯ 6 ಹಂತಗಳ ಪೈಕಿ 4ನೇ ಹಂತದಲ್ಲಿ ಅತ್ಯಧಿಕ ಮತ್ತು 5ನೇ ಹಂತದಲ್ಲಿ ಅತಿ ಕಡಿಮೆ ಮತದಾನವಾಗಿದೆ ಎಂದು ಮಂಗಳವಾರ ಚುನಾವಣಾ ಆಯೋಗ ತಿಳಿಸಿದೆ. 4ನೇ ಹಂತದಲ್ಲಿ ಶೇ.69.16 ರಷ್ಟು ಮತದಾನವಾಗಿದೆ, ಇದು ಆರು ಹಂತಗಳಲ್ಲಿ ಅತ್ಯಧಿಕವಾಗಿದೆ. ಅದೇ ರೀತಿ 5ನೇ ಹಂತದಲ್ಲಿ ಶೇ.62.20 ರಷ್ಟು ಮತದಾನವಾಗಿದೆ. ಶೇಕಡಾವಾರು ಲೆಕ್ಕದಲ್ಲಿ ಹಂತಗಳ ಪೈಕಿ ಅತ್ಯಂತ ಕಡಿಮೆ ಮತದಾನವಾಗಿದೆ. ಉಳಿದಂತೆ ಮೊದಲನೇ ಹಂತದಲ್ಲಿ ಶೇ.66.14, 2ನೇ ಹಂತದಲ್ಲಿ ಶೇ.66.71, ನೇ ಹಂತದಲ್ಲಿ ಶೇ.65.68, 6ನೇ ಹಂತದಲ್ಲಿ ಶೇ.63.37 ರಷ್ಟು ಮತದಾನವಾಗಿದೆ. ಕೊನೆಯ ಹಂತದ ಚುನಾವಣೆ ಜೂ.1 ರಂದು ನಡೆಯಲಿದೆ.