ಮಾಧುರಿ ದೀಕ್ಷಿತ್‌ ಒಲ್ಲೆ ಎಂದ ಹಿನ್ನೆಲೆ : ಮತ್ತೋರ್ವರಿಗೆ ಬಿಜೆಪಿ ಗಾಳ

| Published : Apr 18 2024, 11:24 AM IST / Updated: Apr 18 2024, 11:27 AM IST

bjp flag
ಮಾಧುರಿ ದೀಕ್ಷಿತ್‌ ಒಲ್ಲೆ ಎಂದ ಹಿನ್ನೆಲೆ : ಮತ್ತೋರ್ವರಿಗೆ ಬಿಜೆಪಿ ಗಾಳ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಭಾವಿ, ಶ್ರೀಮಂತ ಮತದಾರರಿರುವ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಉತ್ತಮ ಅಭ್ಯರ್ಥಿ ಕಣಕ್ಕಿಳಿಸಲು ಹುಡುಕಾಟ ಆರಂಭಿಸಿದೆ

ಮುಂಬೈ: ಪ್ರಭಾವಿ, ಶ್ರೀಮಂತ ಮತದಾರರಿರುವ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಉತ್ತಮ ಅಭ್ಯರ್ಥಿ ಕಣಕ್ಕಿಳಿಸಲು ಹುಡುಕಾಟ ಆರಂಭಿಸಿದೆ. 2008ರ ಮುಂಬೈ ದಾಳಿ ಪ್ರಕರಣದಲ್ಲಿ ಪಾಕ್‌ ಉಗ್ರ ಕಸಬ್‌ಗೆ ಗಲ್ಲು ಶಿಕ್ಷೆ ಯಾಗಲು ಕಾರಣರಾದ ಖ್ಯಾತ ವಕೀಲ ಉಜ್ವಲ್‌ ನಿಕ್ಕರಂ ಅವರನ್ನು ಬಿಜೆಪಿ ಸಂಪರ್ಕಿಸಿದೆ ಎನ್ನಲಾಗಿದೆ.

ಕ್ಷೇತ್ರದಲ್ಲಿ ಪ್ರಸ್ತುತ ಸಂಸದೆಯಾಗಿರುವ ಪೂನಂ ಮಹಾಜನ್‌ ಕುರಿತು ಆಂತರಿಕ ಸಮೀಕ್ಷೆಯಲ್ಲಿ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಆಕೆಗೆ ಟಿಕೆಟ್‌ ಕೈ ತಪ್ಪುವುದು ಬಹುತೇಕ ಖಚಿತ ಎನ್ನಲಾಗಿದೆ. 

ಆಕೆಯ ಬದಲಾಗಿ ಕ್ಷೇತ್ರದಲ್ಲಿ ಕಣಕ್ಕಿಳಿಸಲು ಖ್ಯಾತ ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್‌ ಅವರನ್ನು ಸಂಪರ್ಕಿಸಲಾಗಿತ್ತಾದರೂ ಅವರು ಸ್ಪರ್ಧೆಗೆ ಒಲವು ತೋರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ನಿಷ್ಕಳಂಕ ಚಾರಿತ್ರ್ಯ ಹೊಂದಿರುವ ವಕೀಲ ಉಜ್ವಲ್ ಅವರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ಕ್ಷೇತ್ರದಲ್ಲಿ ಮತದಾರರ ಒಲವು ಮರುಗಳಿಕೆ ಮಾಡಿಕೊಳ್ಳಲು ಯತ್ನಿಸುತ್ತಿದೆ ಎನ್ನಲಾಗಿದೆ.