ಮಧ್ಯಪ್ರದೇಶದ ನಿಖಿತಾ ಪೊರ್ವಾಲ್‌ ಫೆಮಿನಾ ಮಿಸ್‌ ಇಂಡಿಯಾ ವರ್ಲ್ಡ್‌ 2024 ಸ್ಪರ್ಧೆಯಲ್ಲಿ ವಿಜೇತ

| Published : Oct 18 2024, 12:19 AM IST / Updated: Oct 18 2024, 04:55 AM IST

Nikita Porval
ಮಧ್ಯಪ್ರದೇಶದ ನಿಖಿತಾ ಪೊರ್ವಾಲ್‌ ಫೆಮಿನಾ ಮಿಸ್‌ ಇಂಡಿಯಾ ವರ್ಲ್ಡ್‌ 2024 ಸ್ಪರ್ಧೆಯಲ್ಲಿ ವಿಜೇತ
Share this Article
  • FB
  • TW
  • Linkdin
  • Email

ಸಾರಾಂಶ

ಮಧ್ಯಪ್ರದೇಶದ ನಿಖಿತಾ ಪೊರ್ವಾಲ್‌ ಫೆಮಿನಾ ಮಿಸ್‌ ಇಂಡಿಯಾ ವರ್ಲ್ಡ್‌ 2024 ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಇದರೊಂದಿಗೆ ನಿಖಿತಾ, ಮಿಸ್‌ ವರ್ಲ್ಡ್‌ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದುಕೊಂಡಿದ್ದಾರೆ.

ಮುಂಬೈ: ಮಧ್ಯಪ್ರದೇಶದ ನಿಖಿತಾ ಪೊರ್ವಾಲ್‌ ಫೆಮಿನಾ ಮಿಸ್‌ ಇಂಡಿಯಾ ವರ್ಲ್ಡ್‌ 2024 ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ. ಇದರೊಂದಿಗೆ ನಿಖಿತಾ, ಮಿಸ್‌ ವರ್ಲ್ಡ್‌ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದುಕೊಂಡಿದ್ದಾರೆ.

ಇನ್ನು ದಾದ್ರಾ ಮತ್ತು ನಗರ್‌ ಹಾವೇಲಿಯ ರೇಖಾ ಪಾಂಡೆ ಹಾಗೂ ಗುಜರಾತ್‌ನ ಆಯುಷಿ ದೋಲಕಿಯಾ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುಕೊಂಡರು. 

ಪ್ರಶಸ್ತಿ ಘೋಷಣೆ ಬಳಿಕ ಪ್ರತಿಕ್ರಿಯಿಸಿದ ಮಧ್ಯಪ್ರದೇಶ ಮೂಲದ ನಿಖಿತಾ, ‘ನನಗೆ ಇದನ್ನು ವಿವರಿಸಲು ಪದಗಳಿಲ್ಲ. ಸ್ಪರ್ಧೆಗೂ ಮುನ್ನ ಇದ್ದ ಅದೇ ನಡುಕ ನನಗಿನ್ನೂ ಇದೆ. ನನ್ನ ಪೋಷಕರ ಸಂತೋಷವನ್ನು ಕಂಡು ನನಗೆ ಕಣ್ಣು ತುಂಬಿ ಬಂದಿದೆ. ಈ ಪ್ರಯಾಣ ಈಗಷ್ಟೇ ಆರಂಭವಾಗಿದೆ. ಮುಂದೆ ಮತ್ತಷ್ಟು ಯಶಸ್ಸು ಒಲಿದು ಬರಲಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.