ಇಂದು ಮಹಾರಾಜ ಟ್ರೋಫಿ ಆಟಗಾರರ ಹರಾಜು ಪ್ರಕ್ರಿಯೆ

| N/A | Published : Jul 15 2025, 01:00 AM IST / Updated: Jul 15 2025, 05:16 AM IST

ಸಾರಾಂಶ

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಆಯೋಜಿಸುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯ 4ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಮಂಗಳವಾರ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿದೆ.

  ಬೆಂಗಳೂರು :  ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಆಯೋಜಿಸುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯ 4ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಮಂಗಳವಾರ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ನಡೆಯಲಿದೆ. ತಾರಾ ಆಟಗಾರರಾದ ಮನೀಶ್‌ ಪಾಂಡೆ, ದೇವದತ್ ಪಡಿಕ್ಕಲ್‌, ಅಭಿನವ್‌ ಮನೋಹರ್‌, ಎಲ್‌.ಆರ್‌.ಚೇತನ್‌ ಸೇರಿ 1000ಕ್ಕೂ ಹೆಚ್ಚು ಆಟಗಾರರು ಹರಾಜಿಗೆ ನೋಂದಾಯಿಸಿಕೊಂಡಿದ್ದಾರೆ.

ಕಳೆದ ವರ್ಷ ಹರಾಜಿನಲ್ಲಿ ಚೇತನ್‌ 8.6 ಲಕ್ಷ ರು.ಗೆ ಬಿಕರಿಯಾಗಿದ್ದರು. ಈ ವರ್ಷವೂ ಅವರು ದೊಡ್ಡ ಮೊತ್ತ ಆಕರ್ಷಿಸುವ ನಿರೀಕ್ಷೆ ಇದೆ.

ಪ್ರತಿ ತಂಡಕ್ಕೂ ಆಟಗಾರರ ಖರೀದಿಗೆ ಒಟ್ಟು 50 ಲಕ್ಷ ರು. ಮಿತಿ ಇದೆ. ಈಗಾಗಲೇ ಎಲ್ಲಾ 6 ತಂಡಗಳು ತಲಾ ನಾಲ್ವರು ಆಟಗಾರರನ್ನು ಉಳಿಸಿಕೊಂಡಿವೆ. ಕನಿಷ್ಠ 16, ಗರಿಷ್ಠ 18 ಆಟಗಾರರನ್ನು ಖರೀದಿ ಮಾಡಲು ಅವಕಾಶವಿದೆ. ತಂಡಬಾಕಿಯಿರುವ ಮೊತ್ತ (ಲಕ್ಷ ರು.ಗಳಲ್ಲಿ)

ಹುಬ್ಬಳ್ಳಿ ಟೈಗರ್ಸ್‌41.5

ಮಂಗಳೂರು ಡ್ರ್ಯಾಗನ್ಸ್‌37.70

ಮೈಸೂರು ವಾರಿಯರ್ಸ್‌36.50

ಶಿವಮೊಗ್ಗ ಲಯನ್ಸ್‌30.80

ಬೆಂಗಳೂರು ಬ್ಲಾಸ್ಟರ್ಸ್‌28.40

ಗುಲ್ಬರ್ಗಾ ಮಿಸ್ಟಿಕ್ಸ್‌24.05

Read more Articles on