ಸಾರಾಂಶ
ಮಹಾರಾಷ್ಟ್ರ ರಾಜ್ಯದ 8 ರೈಲು ನಿಲ್ದಾಣಗಳ ಹೆಸರನ್ನು ಬದಲು ಮಾಡಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಿದೆ. ಜೊತೆಗೆ ಅಹ್ಮದ್‌ನಗರದ ಹೆಸರನ್ನೂ ಬದಲಿಸಿದೆ.
ಮುಂಬೈ: ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ಹೆಸರು ಹಾಗೂ ಮುಂಬೈ 8 ರೈಲು ನಿಲ್ದಾಣಗಳ ಹೆಸರನ್ನು ಬದಲಿಸಲು ಬುಧವಾರ ರಾಜ್ಯ ಸಚಿವ ಸಂಪುಟ ತಿರ್ಮಾನಿಸಿದೆ.
ಅಹ್ಮದ್‌ನಗರವನ್ನು ಅಹಿಲ್ಯಾನಗರ ಎಂದು, ಬ್ರಿಟಿಷ್ ಕಾಲದಲ್ಲಿ ನಿರ್ಮಾಣವಾದ ಮುಂಬೈ ನಗರದ 8 ರೈಲು ನಿಲ್ದಾಣಗಳು ಹಾಗೂ ತಿರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಏಕ್‌ನಾಥ್ ಶಿಂದೆ ತಿಳಿಸಿದ್ದಾರೆ.ಅಹಲ್ಯಾದೇವಿಯ ಸ್ಮರಣಾರ್ಥಕವಾಗಿ ಅಹ್ಮದ್‌ನಗರಕ್ಕೆ ಅಹಿಲ್ಯಾನಗರ ಎಂದು ಬದಲಿಸಲಾಗಿದೆ. 8 ರೈಲು ನಿಲ್ದಾಣಗಳ ಪೈಕಿ, ಕರ್ರಿ ರೋಡ್ ಸ್ಟೇಷನ್‌ನನ್ನು ಲಾಲ್‌ಬಾಗ್, ಸ್ಯಾಂಡ್‌ಹರ್ಸ್ಟ್ ರೋಡ್ ಸ್ಟೇಷನ್‌ನನ್ನು ಡೋಂಗ್ರಿ, ಮರೈನ್ ಲೈನ್ಸ್ ಸ್ಟೇಷನ್‌ನನ್ನು ಮುಂಬಾದೇವಿ, ಚಾರ್ನಿ ರೋಡ್ ಸ್ಟೇಷನ್‌ನನ್ನು ಗಿರ್‌ಗಾಂವ್, ಕಾಟನ್ ಗ್ರೀನ್ ಸ್ಟೇಷನ್‌ನನ್ನು ಕಲಾಚೌಕಿ, ಡಾಕ್‌ಯಾರ್ಡ್ ರೋಡ್ ಸ್ಟೇಷನ್‌ನನ್ನು ಮಜಗಾಂವ್ ಮತ್ತು ಕಿಂಗ್ಸ್ ಸರ್ಕಲ್‌ಅನ್ನು ತೀರ್ಥಂಕರ ಪಾರ್ಶ್ವನಾಥ ಎಂದು ಮರುನಾಮಕರಣ ಮಾಡಲಾಗಿದ್ದು, ಸ್ಯಾಂಡ್‌ಹಸ್ಟ್ ರೋಡ್ ಸ್ಟೇಷನ್‌ನನ್ನು ಎರಡು ನಿಲ್ದಾಣಗಳೆಂದು ಪರಿಗಣಿಸಲಾಗಿದೆ.