ಸಾರಾಂಶ
ನ.20ರಂದು ಮಹಾರಾಷ್ಟ್ರದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ನಿಮಿತ್ತ ಕಾಂಗ್ರೆಸ್ ಪಕ್ಷ ಬುಧವಾರ ಕರ್ನಾಟಕ ಮಾದರಿಯಲ್ಲೇ ಪಂಚ ಗ್ಯಾರಂಟಿಗಳನ್ನು ಘೋಷಿಸಿದೆ.
ಮುಂಬೈ: ನ.20ರಂದು ಮಹಾರಾಷ್ಟ್ರದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ನಿಮಿತ್ತ ಕಾಂಗ್ರೆಸ್ ಪಕ್ಷ ಬುಧವಾರ ಕರ್ನಾಟಕ ಮಾದರಿಯಲ್ಲೇ ಪಂಚ ಗ್ಯಾರಂಟಿಗಳನ್ನು ಘೋಷಿಸಿದೆ.
ಮುಂಬೈನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಘೋಷಣೆಗಳನ್ನು ಮಾಡಿದರು. ಇವುಗಳಲ್ಲಿ ಕರ್ನಾಟಕದ ರೀತಿಯಲ್ಲೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಮಾಸಿಕ 3000 ರು. ಸಹಾಯಧನ ಸೇರಿವೆ.----
5 ಗ್ಯಾರಂಟಿಗಳು- ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಬಸ್ ಪ್ರಯಾಣ
- ರಾಜ್ಯದ ಎಲ್ಲ ಮಹಿಳೆಯರಿಗೆ ಮಾಸಿಕ 3000 ರು. ನೆರವು- ₹3 ಲಕ್ಷದವರೆಗೆ ರೈತರ ಸಾಲ ಮನ್ನಾ. ಸಾಲ ಕಟ್ಟಿದರೆ 50,000 ರು. ಪ್ರೋತ್ಸಾಹಧನ
-ಎಲ್ಲರಿಗೂ 25 ಲಕ್ಷ ರು.ವರೆಗೆ ಆರೋಗ್ಯ ವಿಮೆ ಹಾಗೂ ಉಚಿತ ಔಷಧಿ ವಿತರಣೆ- ನಿರುದ್ಯೋಗಿಗಳಿಗೆ ಸರ್ಕಾರದಿಂದ ಮಾಸಿಕ 4000 ರು. ನೆರವು