ಸಾರಾಂಶ
ಬಾಬ್ರಿ ಮಸೀದಿ ಕೆಡವಿದ ದಿನದಂದು ರಾಮಮಂದಿರ ಕಟ್ಟುವವರೆಗೆ ಚಪ್ಪಲಿ ತೊಡುವುದಿಲ್ಲ ಎಂದು ಶಪಥ ಮಾಡಿದ್ದ ವಿಲಾಸ್ ಭಾವ್ಸಾರ್ ರಾಮಮಂದಿರ ಉದ್ಘಾಟನೆಯಾದ ನಂತರ 32 ವರ್ಷಗಳ ಬಳಿಕ ಚಪ್ಪಲಿ ಧರಿಸಿದರು. 
ಮುಂಬೈ: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಉದ್ಘಾಟನೆಯಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಜಲಗಾಂವ್‌ನಲ್ಲಿರುವ ಕರಸೇವಕರೊಬ್ಬರು ಬರೋಬ್ಬರಿ 32 ವರ್ಷಗಳ ಬಳಿಕ ಪಾದರಕ್ಷೆ ಧರಿಸಿದ್ದಾರೆ. ಈ ಕುರಿತು ಮಾತನಾಡಿದ ಕರಸೇವಕ ವಿಲಾಸ್ ಭಾವ್‌ಸಾರ್, ‘1992ರಲ್ಲಿ ಬಾಬ್ರಿ ಮಸೀದಿ ಕೆಡವಿದ ದಿನದಂದೇ ನಾನು ಅದೇ ಜಾಗದಲ್ಲಿ ರಾಮಮಂದಿರ ಕಟ್ಟುವವರೆಗೆ ಪಾದರಕ್ಷೆ ಧರಿಸುವುದಿಲ್ಲ ಎಂದು ಶಪಥ ಮಾಡಿದ್ದೆ.
ಇಂದು ನನ್ನಂತಹ ಅಸಂಖ್ಯಾತ ರಾಮಭಕ್ತರ ಕನಸು ಸಾಕಾರಗೊಂಡ ಹಿನ್ನೆಲೆಯಲ್ಲಿ ಪಾದರಕ್ಷೆ ಧರಿಸಿದ್ದೇನೆ’ ಎಂದು ತಿಳಿಸಿದರು. ವಿಲಾಸ್ ಅವರಿಗೆ ಮಹಾರಾಷ್ಟ್ರದಲ್ಲಿ ಸಚಿವರಾಗಿರುವ ಗಿರೀಶ್ ಮಹಾಜನ್ ಜಾಮ್ನೇರ್‌ನಲ್ಲಿ ಪಾದರಕ್ಷೆ ತೊಡಿಸಿದರು. ವಿಲಾಸ್ ಸದ್ಯ ಪಾನ್ ಅಂಗಡಿಯಲ್ಲಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))