ಸಾರಾಂಶ
ಮಹಾಯುತಿ ಕೂಟ ಸರ್ಕಾರ, ಶನಿವಾರ ಖಾತೆ ಹಂಚಿಕೆ ಮಾಡಿದೆ. ಅದರನ್ವಯ ಮಹತ್ವದ ಗೃಹ ಖಾತೆಯನ್ನು ಸಿಎಂ ದೇವೇಂದ್ರ ಫಡ್ನವೀಸ್ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಜತೆಗೆ, ಶಕ್ತಿ, ಕಾನೂನು, ನ್ಯಾಯಾಂಗ, ಸಾಮಾನ್ಯ ಆಡಳಿತ, ಮಾಹಿತಿ ಮತ್ತು ಪ್ರಚಾರ ಇಲಾಖೆಗಳು ಕೂಡ ಸಿಎಂ ಪಾಲಾಗಿದೆ.
ನಾಗ್ಪುರ: ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ರಚನೆಗೊಂಡ ಮಹಾಯುತಿ ಕೂಟ ಸರ್ಕಾರ, ಶನಿವಾರ ಖಾತೆ ಹಂಚಿಕೆ ಮಾಡಿದೆ. ಅದರನ್ವಯ ಮಹತ್ವದ ಗೃಹ ಖಾತೆಯನ್ನು ಸಿಎಂ ದೇವೇಂದ್ರ ಫಡ್ನವೀಸ್ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಜತೆಗೆ, ಶಕ್ತಿ, ಕಾನೂನು, ನ್ಯಾಯಾಂಗ, ಸಾಮಾನ್ಯ ಆಡಳಿತ, ಮಾಹಿತಿ ಮತ್ತು ಪ್ರಚಾರ ಇಲಾಖೆಗಳು ಕೂಡ ಸಿಎಂ ಪಾಲಾಗಿದೆ.
ಗೃಹ ಖಾತೆಯ ಆಕಾಂಕ್ಷಿಯಾಗಿದ್ದ ಡಿಸಿಎಂ ಏಕನಾಥ ಶಿಂಧೆ ಅವರಿಗೆ ಗ್ರಾಮೀಣಾಭಿವೃದ್ಧಿ, ವಸತಿ ಮತ್ತು ಲೋಕೋಪಯೋಗಿ ಇಲಾಖೆ ನೀಡಲಾಗಿದೆ. ಡಿಸಿಎಂ ಅಜಿತ್ ಪವಾರ್ ಅವರಿಗೆ ಹಣಕಾಸು ಮತ್ತು ಯೋಜನೆ, ರಾಜ್ಯ ಅಬಕಾರಿ ಖಾತೆಗಳನ್ನು ನೀಡಲಾಗಿದೆ.
ಉಳಿದಂತೆ ಬಿಜೆಪಿಯ ಚಂದ್ರಶೇಖರ ಬಾನವ್ಕುಳೆ ಅವರಿಗೆ ಕಂದಾಯ ಇಲಾಖೆ, ಚಂದ್ರಕಾಂತ್ ಪಾಟಿಲ್ ಅವರಿಗೆ ಉನ್ನತ ಮತ್ತು ತಾಂತ್ರಿಕ ಶಿಕ್ಷಣ, ಸಂಸದೀಯ ವ್ಯವಹಾರ ಖಾತೆ, ಆಶಿಶ್ ಸೇಲಾರ್ ಅವರಿಗೆ ಸಾಂಸ್ಕೃತಿಕ ವ್ಯವಹಾರಗಳು ಮತ್ತು ಮಾಹಿತಿ ತಂತ್ರಜ್ಞಾನ ಖಾತೆ, ಶಿವಸೇನೆಯ ಉದಯ್ ಸಾಮಂತ್ ಅವರಿಗೆ ಕೈಗಾರಿಕೆ, ಎನ್‌ಸಿಪಿಯ ಹಸನ್ ಮುಶ್ರಿಫ್ ಅವರಿಗೆ ವೈದ್ಯಕೀಯ ಶಿಕ್ಷಣ ಖಾತೆಗಳನ್ನು ನೀಡಲಾಗಿದೆ.