ಸಾರಾಂಶ
ಸ್ವಂತ ಕಾರಿಗೆ ರೆಡ್ ಬೀಕನ್ ಹಾಕಿಕೊಂಡು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಕ್ಕೆ ಪುಣೆಯಿಂದ ವಾಶಿಮ್‌ಗೆ ಎತ್ತಂಗಡಿಗೊಂಡಿರುವ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ತಾನು ಸೇವೆಗೆ ಸೇರುವ ಮುನ್ನವೇ ಅಧಿಕಾರಿಗಳ ಮುಂದೆ ತಮ್ಮದೇ ಕಚೇರಿ, ಕಾರ್, ಮನೆ ಸೇರಿದಂತೆ ಹಲವು ಬೇಡಿಕೆಗಳನ್ನಿಟ್ಟಿದ್ದರು
ಮುಂಬೈ: ಸ್ವಂತ ಕಾರಿಗೆ ರೆಡ್ ಬೀಕನ್ ಹಾಕಿಕೊಂಡು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಕ್ಕೆ ಪುಣೆಯಿಂದ ವಾಶಿಮ್‌ಗೆ ಎತ್ತಂಗಡಿಗೊಂಡಿರುವ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ತಾನು ಸೇವೆಗೆ ಸೇರುವ ಮುನ್ನವೇ ಅಧಿಕಾರಿಗಳ ಮುಂದೆ ತಮ್ಮದೇ ಕಚೇರಿ, ಕಾರ್, ಮನೆ ಸೇರಿದಂತೆ ಹಲವು ಬೇಡಿಕೆಗಳನ್ನಿಟ್ಟಿದ್ದರು ಎನ್ನುವ ವಿಚಾರವೂ ಬೆಳಕಿಗೆ ಬಂದಿದೆ.
ಜೂನ್ 3 ರಂದು ಕರ್ತವ್ಯಕ್ಕೆ ಸೇರುವ ಮುನ್ನವೇ ತನಗೆ ಯಾವೆಲ್ಲ ಸೌಲಭ್ಯಗಳ ಸಿದ್ಧತೆ ಮಾಡಬೇಕು ಎನ್ನುವುದರ ಬಗ್ಗೆ ಆಕೆ ಅಧಿಕಾರಿಗಳ ಜೊತೆ ನಡೆಸಿರುವ ವಾಟ್ಸಾಪ್ ಸಂಭಾಷಣೆ ಬಯಲಾಗಿದೆ.
‘ನಾನು ಕೆಲಸಕ್ಕೆ ಸೇರುವ ಜೂನ್ 3 ಕ್ಕೂ ಮುನ್ನ ಗೊತ್ತು ಪಡಿಸಿರುವ ಕ್ಯಾಬಿನ್ ಮತ್ತು ಕಾರ್‌ನ್ನು ಸಿದ್ಧಪಡಿಸಿರಿ. ಆ ಬಳಿಕ ಸಮಯವಿರುವುದಿಲ್ಲ. ಇದು ಸಾಧ್ಯವಾಗದೇ ಇದ್ದರೆ ನನಗೆ ತಿಳಿಸಿ, ನಾನು ಜಿಲ್ಲಾಧಿಕಾರಿಗಳ ಜೊತೆಗೆ ಮಾತನಾಡುತ್ತೇನೆ’ ಎಂದು ಪೂಜಾ ಅಧಿಕಾರಿಗೆ ಹೇಳಿದ್ದಾರೆ. ಪೂಜಾಗೆ ಪತ್ಯೇಕ ಕ್ಯಾಬಿನ್ ಕೂಡ ನೀಡಲಾಗಿತ್ತು., ಆದರೆ ಅದಕ್ಕೆ ಹೊಂದಿಕೊಂಡಂತೆ ಶೌಚಾಲಯವಿಲ್ಲ ಎನ್ನುವ ಕಾರಣಕ್ಕೆ ಅದನ್ನು ನಿರಾಕರಿಸಿದ್ದರು.
ಇದಲ್ಲದೆ, ಕೆಲಸಕ್ಕೆ ಹಾಜರಾಗುವ ಮುನ್ನ ತಮ್ಮ ತಂದೆ ದಿಲೀಪ್ ಖೇಡ್ಕೆರ್ ಜೊತೆಗೆ ಕಚೇರಿ ಬಂದಿದ್ದ ಅಧಿಕಾರಿ ಗಣಿಗಾರಿಕೆ ಇಲಾಖೆ ಪಕ್ಕದಲ್ಲಿರುವ ವಿಐಪಿ ಹಾಲ್‌ನ್ನು ಆಕೆಯ ಕ್ಯಾಬಿನ್ ಆಗಿ ಮಾಡಲು ಪ್ರಸ್ತಾಪವನ್ನು ಇಟ್ಟಿದ್ದರು ಎನ್ನಲಾಗಿದೆ.