288 ಸ್ಥಾನ ಬಲದ ಮಹಾರಾಷ್ಟ್ರ ವಿಧಾನಸಭೆ : 7995 ಅಭ್ಯರ್ಥಿಗಳ ಸ್ಪರ್ಧೆ - ಬಿಜೆಪಿ ಅತಿ ಹೆಚ್ಚು 148 ಸ್ಥಾನಗಳಲ್ಲಿ ಕಣಕ್ಕೆ

| Published : Nov 01 2024, 12:04 AM IST / Updated: Nov 01 2024, 06:30 AM IST

288 ಸ್ಥಾನ ಬಲದ ಮಹಾರಾಷ್ಟ್ರ ವಿಧಾನಸಭೆ : 7995 ಅಭ್ಯರ್ಥಿಗಳ ಸ್ಪರ್ಧೆ - ಬಿಜೆಪಿ ಅತಿ ಹೆಚ್ಚು 148 ಸ್ಥಾನಗಳಲ್ಲಿ ಕಣಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

288 ಸ್ಥಾನ ಬಲದ ಮಹಾರಾಷ್ಟ್ರ ವಿಧಾನಸಭೆಗೆ 7995 ಅಭ್ಯರ್ಥಿಗಳು ಒಟ್ಟು 10,905 ನಾಮಪತ್ರ ಸಲ್ಲಿಸಿದ್ದಾರೆ. 2019ರಲ್ಲಿ 3,239 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಮುಂಬೈ: 288 ಸ್ಥಾನ ಬಲದ ಮಹಾರಾಷ್ಟ್ರ ವಿಧಾನಸಭೆಗೆ 7995 ಅಭ್ಯರ್ಥಿಗಳು ಒಟ್ಟು 10,905 ನಾಮಪತ್ರ ಸಲ್ಲಿಸಿದ್ದಾರೆ. 2019ರಲ್ಲಿ 3,239 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ ಆಡಳಿತಾರೂಢ ಸರ್ಕಾರದಲ್ಲಿ ಪ್ರಮುಖ ಪಕ್ಷವಾಗಿರುವ ಬಿಜೆಪಿ ಅತಿ ಹೆಚ್ಚು 148 ಸ್ಥಾನಗಳಲ್ಲಿ ಕಣಕ್ಕೆ ಇಳಿದಿದ್ದರೆ, ವಿಪಕ್ಷ ಬಣದಲ್ಲಿ ಪ್ರಮುಖವಾಗಿರುವ ಕಾಂಗ್ರೆಸ್‌ 103ರಲ್ಲಿ ಕಣಕ್ಕೆ ಇಳಿದಿದೆ.

ಮಯಾಯುತಿ:  ಆಡಳಿತಾರೂಢ ಮಹಾಯುತಿ ಮೈತ್ರಿಕೂಟದಲ್ಲಿ ಬಿಜೆಪಿ 148, ಶಿವಸೇನೆ 80 (ಏಕನಾಥ್‌ ಶಿಂಧೆ), ಎನ್‌ಸಿಪಿ 53 (ಅಜಿತ್‌ ಬಣ) ಸ್ಥಾನದಲ್ಲಿ ಸ್ಪರ್ಧಿಸಿವೆ. ಮಿಕ್ಕ 8ರಲ್ಲಿ 5 ಸೀಟನ್ನು ಉಳಿದ ಮೈತ್ರಿ ಪಕ್ಷಗಳಿಗೆ ನೀಡಿದ್ದು, 3 ಸೀಟುಗಳ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಮತ್ತೊಂದೆಡೆ ವಿಪಕ್ಷ ಮಹಾವಿಕಾಸ ಆಘಾಡಿಯಿಂದ ಕಾಂಗ್ರೆಸ್‌ 103, ಶಿವಸೇನೆ (ಉದ್ಧವ್‌) 89 ಮತ್ತು ಎನ್‌ಸಿಪಿ (ಶರದ್‌) 87 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. 6 ಸೀಟುಗಳಲ್ಲಿ ಮಿಕ್ಕ ಮೈತ್ರಿ ಪಕ್ಷಗಳು ಸ್ಪರ್ಧೆ ಮಾಡುತ್ತಿವೆ.

ರಾಜ್ಯದಲ್ಲಿ ನ.20ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, 23ರಂದು ಫಲಿತಾಂಶ ಹೊರಬೀಳಲಿದೆ.