ಫ್ಲೈದುಬೈ ವಿಮಾನ 37 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಸೆ.30ರಂದು ಕಾಕ್‌ಪಿಟ್‌ನಲ್ಲಿ ಸಹಪೈಲಟ್‌ ಹಮಾಮ್‌ ತಮ್ಮ ಮೇಲೆ ದಾಳಿ ಮಾಡಿದ ಸಂದರ್ಭವನ್ನು ಪೈಲಟ್ ಸ್ಮಿತ್‌ ಮಚ್ಛರ್‌ ಅವರು ಸವಿವರವಾಗಿ ಇಸ್ರೇಲ್‌ ಪ್ರಧಾನಿ ನೆತನ್ಯಾಹು ಅವರೆದುರು ಬಿಚ್ಚಿಟ್ಟಿದ್ದಾರೆ.

ಅಬುಧಾಬಿ: ಫ್ಲೈದುಬೈ ವಿಮಾನ 37 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಸೆ.30ರಂದು ಕಾಕ್‌ಪಿಟ್‌ನಲ್ಲಿ ಸಹಪೈಲಟ್‌ ಹಮಾಮ್‌ ತಮ್ಮ ಮೇಲೆ ದಾಳಿ ಮಾಡಿದ ಸಂದರ್ಭವನ್ನು ಪೈಲಟ್ ಸ್ಮಿತ್‌ ಮಚ್ಛರ್‌ ಅವರು ಸವಿವರವಾಗಿ ಇಸ್ರೇಲ್‌ ಪ್ರಧಾನಿ ನೆತನ್ಯಾಹು ಅವರೆದುರು ಬಿಚ್ಚಿಟ್ಟಿದ್ದಾರೆ.

‘ಪ್ರಾರ್ಥನೆ ಮಾಡಲೆಂದು ಹಮಾಮ್‌ ಎದ್ದುನಿಂತ

‘ಪ್ರಾರ್ಥನೆ ಮಾಡಲೆಂದು ಹಮಾಮ್‌ ಎದ್ದುನಿಂತಾಗ, ಗೌರವಸೂಚಕವಾಗಿ ನಾನು ತಿರುಗಿ ನೋಡಲಿಲ್ಲ. ಕೆಲ ನಿಮಿಷಗಳಾದ ಬಳಿಕ ಏನೋ ಆದಂತಾಗಿ, ವಿಮಾನಕ್ಕೇನಾದರೂ ಆಯಿತೇ ಎಂದುಕೊಂಡೆ. ನನಗೆ ಇನ್ನೊಂದು ಪೆಟ್ಟು ಬಿದ್ದಾಗ, ಆತನೇ ಹೊಡೆಯುತ್ತಿದ್ದ ಎಂದು ತಿಳಿಯಿತು. ಕೂಡಲೇ ಕಾಕ್‌ಪಿಟ್‌ನ ಬಾಗಿಲು ತೆರೆದೆ. ಆದರೆ ಅವನು ಅದನ್ನು ಮುಚ್ಚಿಬಿಟ್ಟ ಪರಿಣಾಮ ನಾನು ನೆಲಕ್ಕೆ ಬಿದ್ದೆ. ಅದಾಗಿಯೂ ಆ ಬಾಗಿಲನ್ನು ಮತ್ತೆ ತೆರೆಯುವ ಅವಕಾಶವಿದೆ ಎಂಬುದನ್ನು ಮನಗಂಡು ಅಂತೆ ಮಾಡಿದಾಗ, ಒಳಬರಲೆಂದು ಜನ ಕಾಯುತ್ತಾ ನಿಂತಿದ್ದುದು ಕಾಣಿಸಿತು’ ಎಂದು ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿಯೇ ಸ್ಮಿತ್‌ ವಿವರಿಸಿದ್ದಾರೆ.

ನೀವು ಇಸ್ರೇಲ್‌, ಭಾರತ ಮತ್ತು ಇಡೀ ವಿಶ್ವಕ್ಕೇ ಹೀರೋ

ಈ ವೇಳೆ ಮಚ್ಛರ್‌ರನ್ನು ‘ನೀವು ಇಸ್ರೇಲ್‌, ಭಾರತ ಮತ್ತು ಇಡೀ ವಿಶ್ವಕ್ಕೇ ಹೀರೋ’ ಎಂದು ನೆತನ್ಯಾಹು ಕೊಂಡಾಡಿದ್ದಾರೆ. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಪೈಲಟ್‌ಗೆ ವಿಡಿಯೋ ಕರೆ ಮಾಡಿ ಧೈರ್ಯ ತುಂಬಿದ್ದರು.