ಸ್ಮಿತ್ ಮಚ್ಛರ್ ಅವರ ಮೇಲೆ ಹಲ್ಲೆ ನಡೆಸಲು ಒಮಾನಿ ಪೈಲಟ್ ಹೊರಗಿನಿಂದ ಯಾವುದೇ ಚಾಕು ಅಥವಾ ಆಯುಧವನ್ನು ತಂದಿರಲಿಲ್ಲ. ಬದಲಾಗಿ ವಿಮಾನದ ಕಾಕ್‌ಪಿಟ್‌ನಲ್ಲೇ ತುರ್ತು ಸಂದರ್ಭಗಳಿಗಾಗಿ ಇರಿಸಲಾಗುವ ಕೈಕೊಡಲಿ ಬಳಸಿ ಈ ದಾಳಿ ನಡೆಸಿದ್ದ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
ಸಹಪೈಲಟ್ ಹೊರಗಿನಿಂದ ಚಾಕು ತಂದಿರಲಿಲ್ಲ?
ಟೆಲ್ ಅವೀವ್: ಸ್ಮಿತ್ ಮಚ್ಛರ್ ಅವರ ಮೇಲೆ ಹಲ್ಲೆ ನಡೆಸಲು ಒಮಾನಿ ಪೈಲಟ್ ಹೊರಗಿನಿಂದ ಯಾವುದೇ ಚಾಕು ಅಥವಾ ಆಯುಧವನ್ನು ತಂದಿರಲಿಲ್ಲ. ಬದಲಾಗಿ ವಿಮಾನದ ಕಾಕ್‌ಪಿಟ್‌ನಲ್ಲೇ ತುರ್ತು ಸಂದರ್ಭಗಳಿಗಾಗಿ ಇರಿಸಲಾಗುವ ಕೈಕೊಡಲಿ ಬಳಸಿ ಈ ದಾಳಿ ನಡೆಸಿದ್ದ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.ಅಂತಾರಾಷ್ಟ್ರೀಯ ವಿಮಾನಯಾನ ನಿಯಮಾವಳಿಗಳ ಪ್ರಕಾರ, ಪ್ರತಿಯೊಂದು ವಾಣಿಜ್ಯ ವಿಮಾನದಲ್ಲೂ ಕಾಕ್‌ಪಿಟ್ ಒಳಗೆ ಇಂತಹದೊಂದು ಕೈ ಕೊಡಲಿಯನ್ನುಇಡುವುದು ಕಡ್ಡಾಯವಾಗಿದೆ. ವಿಮಾನ ತಯಾರಾಗುವಾಗಲೇ ಈ ಆಯುಧವನ್ನು ಅಲ್ಲಿ ಅಳವಡಿಸಲಾಗಿರುತ್ತದೆ. ಅಪಘಾತ, ಬೆಂಕಿ ಅನಾಹುತದಂತಹ ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಕಾಕ್‌ಪಿಟ್‌ನ ಬಾಗಿಲು ಅಥವಾ ಕಿಟಕಿಗಳನ್ನು ಮುರಿದು ಹೊರಬರಲು ಇದನ್ನು ಬಳಸಲಾಗುತ್ತದೆ.ಹಿಂದೆ ಈ ಕೊಡಲಿಯನ್ನು ವಿಮಾನದ ಮುಖ್ಯ ಕ್ಯಾಬಿನ್‌ನಲ್ಲಿ (ಪ್ರಯಾಣಿಕರು ಕುಳಿತುಕೊಳ್ಳುವ ಜಾಗದಲ್ಲಿ) ಇಡಲಾಗುತ್ತಿತ್ತು. ಆದರೆ, 25 ವರ್ಷಗಳ ಹಿಂದೆ ಅಮೆರಿಕದಲ್ಲಿ ನಡೆದ 9/11 ಭಯೋತ್ಪಾದಕರ ದಾಳಿಯ ನಂತರ, ಸುರಕ್ಷತಾ ದೃಷ್ಟಿಯಿಂದ ಇವುಗಳನ್ನು ಕ್ಯಾಬಿನ್‌ನಿಂದ ತೆಗೆದು ಕಾಕ್‌ಪಿಟ್‌ಗೆ ಸ್ಥಳಾಂತರಿಸಲಾಯಿತು. ಪೈಲಟ್‌ಗಳಿಗೆ ಯಾವುದೇ ತುರ್ತು ಸಂದರ್ಭದಲ್ಲಿ ತಕ್ಷಣ ಕೈಗೆ ಸಿಗುವಂತೆ ಇದನ್ನು ಕಾಕ್‌ಪಿಟ್‌ನಲ್ಲಿ ಕಾಯ್ದಿರಿಸಲಾಗಿರುತ್ತದೆ.