ಫ್ಲೈದುಬೈ ವಿಮಾನ ಪತನ ತಪ್ಪಿಸಿ 180 ಜನರ ಜೀವ ಕಾಪಾಡಿದ ವಿಮಾನದ ಮುಖ್ಯ ಪೈಲಟ್‌, ಭಾರತೀಯ ಸ್ಮಿತ್‌ ಮಚ್ಛರ್‌ ಬಗ್ಗೆ ಜಾಗತಿಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ.

ನವದೆಹಲಿ: ಫ್ಲೈದುಬೈ ವಿಮಾನ ಪತನ ತಪ್ಪಿಸಿ 180 ಜನರ ಜೀವ ಕಾಪಾಡಿದ ವಿಮಾನದ ಮುಖ್ಯ ಪೈಲಟ್‌, ಭಾರತೀಯ ಸ್ಮಿತ್‌ ಮಚ್ಛರ್‌ ಬಗ್ಗೆ ಜಾಗತಿಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ.

ಫ್ಲೈದುಬೈ ಅವಘಡ ಒಂದು ಉಗ್ರಕೃತ್ಯ. ಅದು ಮಹಾದುರಂತವಾಗಿ ಕೊನೆಯಾಗುವ ಸಾಧ್ಯತೆಯಿತ್ತು. ಆದರೆ ಭಾರತೀಯ ಪೈಲಟ್‌ ಸ್ಮಿತ್‌ ಮಚ್ಛರ್‌ ಅವರ ಪರಾಕ್ರಮದಿಂದ ಅನಾಹುತ ತಪ್ಪಿತು. ಸ್ಮಿತ್‌ ರಿಯಲ್‌ ಹೀರೋ’ ಎಂದು ದಕ್ಷಿಣ ಭಾರತಕ್ಕೆ ಇಸ್ರೇಲ್‌ನ ಕಾನ್ಸುಲ್ ಜನರಲ್ ಆಗಿರುವ ಓರ್ಲಿ ವಿಟ್ಜ್‌ಮನ್‌ ಗುರುವಾರ ಶ್ಲಾಘಿಸಿದ್ದಾರೆ. ಇನ್ನು ‘ಸ್ಮಿತ್‌ ಸ್ವತಃ ಇರಿತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡರೂ ಪ್ರತಿರೋಧಿಸಿದರು. ಕಾಕ್‌ಪಿಟ್ ಬಾಗಿಲು ತೆರೆದು, ಪ್ರಯಾಣಿಕರು ಮತ್ತು ಸಿಬ್ಬಂದಿಯ ರಕ್ಷಣೆಗೆ ಅನುವು ಮಾಡಿಕೊಟ್ಟರು. ಅವರು ನಿಜವಾದ ಹೀರೋ. ಅವರ ಅಸಾಧಾರಣ ಧೈರ್ಯಕ್ಕೆ ನನ್ನ ಸೆಲ್ಯೂಟ್’ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಬಣ್ಣಿಸಿದ್ದಾರೆ.ಜೊತೆಗೆ ಅಮೆರಿಕ ಅಧ್ಯಕ್ಷ ಟ್ರಂಪ್‌, ರಷ್ಯಾ ಅಧ್ಯಕ್ಷ ವ್ಯಾಡಿಮಿರ್‌ ಪುಟಿನ್‌ ಆದಿಯಾಗಿ ಹಲವು ಜಾಗತಿಕ ಗಣ್ಯರು ಸ್ಮಿತ್‌ ಸಾಹಸ ಕೊಂಡಾಡಿದ್ದಾರೆ.

ಈ ನಡುವೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್‌, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಬಿಜೆಪಿ ಅಧ್ಯಕ್ಷ ನಿತಿನ್‌ ನವೀನ್‌, ಕೇಂದ್ರ ಸಚಿವರಾದ ಪೀಯೂಷ್‌ ಗೋಯಲ್‌, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‌, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಆರ್‌ಎಸ್‌ಎಸ್‌ನ ಸುನಿಲ್‌ ಅಂಬೇಕರ್‌ ಅವರು ಮಚ್ಛರ್‌ರನ್ನು ‘ಅಸಲಿ ಹೀರೋ’ ಎಂದು ಕೊಂಡಾಡಿದ್ದಾರೆ.