ಸಾರಾಂಶ
ನವದೆಹಲಿ: ಗ್ಯಾಂಗ್‌ಸ್ಟರ್‌ಗಳಾದ ಲಾರೆನ್ಸ್ ಬಿಷ್ಣೋಯಿ, ಬಂಬಿಹಾ, ಗೋಗಿ ಹಿಮಾಂಶು ಭಾಯ್ ಗುಂಪುಗಳಿಗೆ ಅಕ್ರಮವಾಗಿ ಶಸ್ತ್ರಾಸ್ತ್ರ ಪೂರೈಸುತ್ತಿದ್ದ ಗುಂಪನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ರೋಹಿಣಿ ಪ್ರದೇಶದಲ್ಲಿ ನಾಲ್ವರನ್ನು ಬಂಧಿಸಲಾಗಿದ್ದು, ಇವರು ಟರ್ಕಿ ಹಾಗೂ ಚೀನಾ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನದಿಂದ ಡ್ರೋನ್‌ನಲ್ಲಿ ತರಿಸಿಕೊಂಡು ಪೂರೈಸುತ್ತಿದ್ದರು ಎಂದು ಗೊತ್ತಾಗಿದೆ.
ಬಂಧಿತರು ಪಂಜಾಬ್ ಮತ್ತು ಉತ್ತರಪ್ರದೇಶದ ನಿವಾಸಿಗಳು
ಬಂಧಿತರು ಪಂಜಾಬ್ ಮತ್ತು ಉತ್ತರಪ್ರದೇಶದ ನಿವಾಸಿಗಳು. ಇವರಿಂದ ಬಂಧಿತರಿಂದ 10 ಹೈ-ಎಂಡ್ ಪಿಸ್ತೂಲು ಸೇರಿದಂತೆ ಹಲವು ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್‌ಐ ನಂಟಿನ ಈ ಜಾಲವು, ಪಾಕ್‌ನಿಂದ ಡ್ರೋನ್ ಬಳಸಿಕೊಂಡು ಶಸ್ತ್ರಾಸ್ತ್ರ ತರಿಸುತ್ತಿತ್ತು. ಈ ಚೀನಾ ಹಾಗೂ ಟರ್ಕಿ ನಿರ್ಮಿತ ಆಯುಧಗಳನ್ನು ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಸುತ್ತಮುತ್ತಲಿನ ರಾಜ್ಯಗಳಲ್ಲಿರುವ ಗ್ಯಾಂಗ್‌ಸ್ಟರ್‌ಗಳಿಗೆ ಸಪ್ಲೈ ಮಾಡುತ್ತಿತ್ತು ಎಂದು ತಿಳಿದುಬಂದಿದೆ.
ಮನ್‌ದೀಪ್ ಮತ್ತು ದಲ್ವಿಂದರ್ ಎಂಬುವವರನ್ನು ಬಂಧಿಸಲಾಗಿತ್ತು
‘ನ.19ರಂದು ರೋಹಿಣಿಯಲ್ಲಿ ಶಸ್ತ್ರಾಸ್ತ್ರ ಪೂರೈಸಲು ತೆರಳಿದ್ದ ಮನ್‌ದೀಪ್ ಮತ್ತು ದಲ್ವಿಂದರ್ ಎಂಬುವವರನ್ನು ಬಂಧಿಸಲಾಗಿತ್ತು. ಅವರ ವಿಚಾರಣೆ ವೇಳೆ ತಿಳಿದುಬಂದ ಮಾಹಿತಿಯ ಆಧಾರದಲ್ಲಿ ದಾಳಿ ನಡೆಸಿದಾಗ ಇನ್ನೂ 2 ಶಸ್ತ್ರಾಸ್ತ್ರಗಳು ಸಿಕ್ಕಿದ್ದವು. ಬಳಿಕ ರೋಹನ್ ತೋಮರ್ ಮತ್ತು ಅಜಯ್ ಅಲಿಯಾಸ್ ಮೋನುನನ್ನು ಬಂಧಿಸಿದೆವು’ ಎಂದು ಕ್ರೈಂ ಬ್ರಾಂಚ್‌ನ ಕಮಿಷನರ್ ಸುರೇಂದ್ರ ಕುಮಾರ್ ಹೇಳಿದ್ದಾರೆ.

;Resize=(128,128))
;Resize=(128,128))
;Resize=(128,128))
;Resize=(128,128))