ಸಾರಾಂಶ
ನಟ ಸಲ್ಮಾನ್ ಖಾನ್ ಜತೆ ಆಪ್ತ ಎನ್‌ಸಿಪಿ ಮುಖಂಡ ಬಾಬಾ ಸಿದ್ದಿಕಿ ಹತ್ಯೆಯ ಸಂಚು ರೂಪಿಸಿದ್ದ ಪಾತಕಿ ಅನ್ಮೋಲ್ ಬಿಷ್ಣೋಯಿ
ನವದೆಹಲಿ: ನಟ ಸಲ್ಮಾನ್ ಖಾನ್ ಜತೆ ಆಪ್ತ ಎನ್‌ಸಿಪಿ ಮುಖಂಡ ಬಾಬಾ ಸಿದ್ದಿಕಿ ಹತ್ಯೆಯ ಸಂಚು ರೂಪಿಸಿದ್ದ ಪಾತಕಿ ಅನ್ಮೋಲ್ ಬಿಷ್ಣೋಯಿಯನ್ನು ಅಮೆರಿಕ ಮಂಗಳವಾರ ಗಡೀಪಾರು ಮಾಡಿದೆ. ಆತ ಬುಧವಾರ ಭಾರತಕ್ಕೆ ಆಗಮಿಸುವ ಸಾಧ್ಯತೆ ಇದೆ.
ಗಡೀಪಾರಿನ ಬಗ್ಗೆ ಅಮೆರಿಕದ ಗೃಹ ಇಲಾಖೆ ಬಾಬಾ ಸಿದ್ದಿಕಿ ಪುತ್ರ ಜೀಶನ್‌ಗೆ ಕಳಿಸಿದ ಇ-ಮೇಲ್‌ನಲ್ಲಿ ಮಾಹಿತಿ ನೀಡಿದೆ. ಈತ ಕುಕ್ಯಾತ ಪಾತಕಿ ಲಾರೆನ್ಸ್ ಬಿಷ್ಣೋಯಿಯ ಸೋದರನಾಗಿದ್ದಾನೆ. ಸಿದ್ದಿಕಿ ಹತ್ಯೆ, 2022ರಲ್ಲಿ ನಡೆದ ಗಾಯಕ ಸಿದ್ದು ಮೂಸೆವಾಲ ಹತ್ಯೆ, ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ ಸೇರಿ ಅನೇಕ ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿದ್ದಾನೆ. ಈತನ ವಿರುದ್ಧ ಇಂಟರ್‌ಪೋಲ್ ರೆಡ್-ಕಾರ್ನರ್ ನೋಟಿಸ್ ಜಾರಿ ಮಾಡಿತ್ತು.;Resize=(128,128))
;Resize=(128,128))
;Resize=(128,128))
;Resize=(128,128))