ಉಗ್ರವಾದದ ವಿಷಯದಲ್ಲಿ ದ್ವಂದ್ವನೀತಿ ಅಥವಾ ರಾಜೀ ಮಾಡಿಕೊಳ್ಳುವುದಿಲ್ಲ. ಭಯೋತ್ಪಾದನೆಯ ವಿರುದ್ಧ ಸಂಘಟಿತ ಹೋರಾಟ ನಡೆಸಿ ಇಂಡೋ-ಪೆಸಿಫಿಕ್ ವಲಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಸ್ಥಾಪಿಸಲು ಭಾರತ ಮತ್ತು ಮಲೇಷ್ಯಾ ಬದ್ಧವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
- ಇಂಡೋ-ಪೆಸಿಫಿಕ್‌ನಲ್ಲಿ ಶಾಂತಿ ಸ್ಥಾಪನೆಗೆ ಬದ್ಧ
- ಉಗ್ರ ನಿಗ್ರಹಕ್ಕೆ ಜಾಗತಿಕ ಯತ್ನ ಅಗತ್ಯ- ಮಲೇಷ್ಯಾ ಪ್ರವಾಸದಲ್ಲಿ ಪ್ರಧಾನಿ
=====ಮಲೇಷ್ಯಾದಲ್ಲಿ ಶೀಘ್ರ ರಾಯಭಾರ ಕಚೇರಿ ಸ್ಥಾಪನೆಯುಎನ್‌ಎಸ್‌ಸಿ ಸದಸ್ಯತ್ವಕ್ಕೆ ಮಲೇಷ್ಯಾ ಬೆಂಬಲಸ್ಥಳೀಯ ಕರೆನ್ಸಿ ಬಳಸಿ ವ್ಯಾಪಾರಕ್ಕೆ ನಿರ್ಧಾರ
--ಕೌಲಾಲಂಪುರ: ಉಗ್ರವಾದದ ವಿಷಯದಲ್ಲಿ ದ್ವಂದ್ವನೀತಿ ಅಥವಾ ರಾಜೀ ಮಾಡಿಕೊಳ್ಳುವುದಿಲ್ಲ. ಭಯೋತ್ಪಾದನೆಯ ವಿರುದ್ಧ ಸಂಘಟಿತ ಹೋರಾಟ ನಡೆಸಿ ಇಂಡೋ-ಪೆಸಿಫಿಕ್ ವಲಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಸ್ಥಾಪಿಸಲು ಭಾರತ ಮತ್ತು ಮಲೇಷ್ಯಾ ಬದ್ಧವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 2 ದಿನಗಳ ಮಲೇಷ್ಯಾ ಪ್ರವಾಸದಲ್ಲಿರುವ ಮೋದಿ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ‘ಇಂಡೋ-ಪೆಸಿಫಿಕ್ ವಲಯವು ವಿಶ್ವದ ಬೆಳವಣಿಗೆಯ ಎಂಜಿನ್ ಆಗಿ ಹೊರಹೊಮ್ಮುತ್ತಿದೆ. ಆಸಿಯಾನ್ ರಾಷ್ಟ್ರಗಳೊಂದಿಗೆ ಸೇರಿ ಈ ಭಾಗದಲ್ಲಿ ಶಾಂತಿ ಮತ್ತು ಸ್ಥಿರತೆ ಸ್ಥಾಪನೆಗೆ ನಾವು ಬದ್ಧರಾಗಿದ್ದೇವೆ. ಉಗ್ರವಾದವನ್ನು ಮಟ್ಟಹಾಕಲು ಜಾಗತಿಕ ಮಟ್ಟದಲ್ಲಿ ಪ್ರಯತ್ನಗಳಾಗಬೇಕು’ ಎಂದಿದ್ದಾರೆ. ಜತೆಗೆ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರ ಜತೆ ಸೇರಿ ಎಲ್ಲಾ ವಿಧದ ಉಗ್ರವಾದವನ್ನು ಖಂಡಿಸಿ ಆ ಬಗೆಗಿನ ಶುನ್ಯ ಸಹಿಷ್ಣುತೆಯನ್ನು ಪುನರುಚ್ಚರಿಸಿದ್ದಾರೆ.ಇದೇ ವೇಳೆ, ಮಲೇಷ್ಯಾದಲ್ಲಿ ಭಾರತದ ರಾಯಭಾರ ಕಚೇರಿಯನ್ನು ಸ್ಥಾಪಿಸುವುದಾಗಿಯೂ ಅವರು ಘೋಷಿಸಿದರು. ಅತ್ತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ಯ ಕೊಡಿಸಲು ಬೆಂಬಲಿಸುವುದಾಗಿ ಮಲೇಷ್ಯಾ ಭರವಸೆ ನೀಡಿದೆ. ವ್ಯಾಪಾರಕ್ಕೆ ₹ ಬಳಕೆ:
‘ನಮ್ಮೆರಡೂ ದೇಶಗಳು ಕಡಲಲ್ಲಿ ನೆರೆಹೊರೆಯವರಾಗಿದ್ದೇವೆ. ಜನರ ನಡುವೆಯೂ ಆಳವಾದ ಸೌಹಾರ್ದಯುತ ಸಂಬಂಧವಿದೆ’ ಎಂದು ಹರ್ಷಿಸಿದ ಮೋದಿ, ಅಮೆರಿಕದ ಡಾಲರ್‌ಗೆ ಪರ್ಯಾಯವಾಗಿ ಎರಡೂ ರಾಷ್ಟ್ರಗಳು ಭಾರತದ ರುಪಾಯಿ ಮತ್ತು ಮಲೇಷ್ಯಾದ ರಿಂಗಿಟ್‌ನಲ್ಲಿ ವ್ಯಾಪಾರ ಮಾಡುವುದಾಗಿ ಘೋಷಿಸಿದರು. ಆಸಿಯಾನ್ ರಾಷ್ಟ್ರಗಳ ಜತೆಗಿನ ಭಾರತದ ವ್ಯಾಪಾರ ಒಪ್ಪಂದವನ್ನು(ಎಐಟಿಐಜಿಎ) ಆದಷ್ಟು ಬೇಗ ಅಂತಿಮಗೊಳಿಸಬೇಕು ಎಂದೂ ಹೇಳಿದರು. ಇದನ್ನು ಗಮನಾರ್ಹ ಬೆಳವಣಿಗೆಯೆಂದು ಬಣ್ಣಿಸಿದ ಇಬ್ರಾಹಿಂ, ‘ಎಐ ಮತ್ತು ಡಿಜಿಟಲ್ ತಂತ್ರಜ್ಞಾನ, ಆರೋಗ್ಯ, ಸೆಮಿಕಂಡಕ್ಟರ್, ಆಹಾರ ಭದ್ರತೆಯ ಕ್ಷೇತ್ರಗಳಲ್ಲಿ ಎರಡೂ ರಾಷ್ಟ್ರಗಳ ಸಹಭಾಗಿತ್ವ ಸ್ಥಾಪಿಸುತ್ತೇವೆ’ ಎಂದರು. ===6 ಒಪ್ಪಂದಗಳಿಗೆ ಸಹಿ ಆರ್ಥಿಕತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಭಾಗಿತ್ವದ ಸ್ಥಾಪಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಇಬ್ರಾಹಿಂ ಅವರ ಜತೆಗಿನ ಮಾತುಕತೆ ಬಳಿಕ 6 ಒಪ್ಪಂದಗಳಿಗೆ ಸಂಬಂಧಿಸಿದ ತಿಳುವಳಿಗೆ ಪತ್ರಗಳಿಗೆ ಸಹಿ ಮಾಡಿದರು. ಇದು ಶ್ರವ್ಯ-ದೃಶ್ಯ(ಚಲನಚಿತ್ರ, ಟಿ.ವಿ. ಕಾರ್ಯಕ್ರಮ) ಸಹನಿರ್ಮಾಣ, ವಿಪತ್ತು ನಿರ್ವಹಣೆ ಸಹಕಾರ, ಭ್ರಷ್ಟಾಚಾರ ನಿಗ್ರಹ, ವಿಶ್ವಸಂಸ್ಥೆಯ ಶಾಂತಿಪಾಲನೆ, ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಸಹಭಾಗಿತ್ವವನ್ನು ಒಳಗೊಂಡಿದೆ. ಜತೆಗೆ ಮಲೇಷ್ಯಾದಲ್ಲಿರುವ ಭಾರತೀಯರ ಸಾಮಾಜಿಕ ಭದ್ರತೆ ಕುರಿತು ಜ್ಞಾಪಕ ಪತ್ರ, ವೃತ್ತಿಪರ ತರಬೇತಿ ಮತ್ತು ಶಿಕ್ಷಣದಲ್ಲಿ ಸಹಕಾರ, ಭದ್ರತಾ ಸಹಕಾರ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ ವಿನಿಮಯದಂತಹ ಕಡತ ಹಾಗೂ ವರದಿಗಳನ್ನು ಸಲ್ಲಿಸಲಾಯಿತು. ==
ಮಲೇಷ್ಯಾ ಪ್ರಧಾನಿಎಂಜಿಆರ್ ಅಭಿಮಾನಿಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಭಾರತೀಯರಂತೆ, ತಮಿಳು ನಟ ಹಾಗೂ ರಾಜಕಾರಣಿಯೂ ಆಗಿದ್ದ ಎಂಜಿಆರ್(ಮರೂಥುರ್ ಗೋಪಾಲನ್ ರಾಮಚಂದ್ರನ್) ಅವರ ಅಭಿಮಾನಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಜತೆಗೆ, ಅವರದೇ ಚಿತ್ರವೊಂದರ ಗೀತೆಯಾಗಿರುವ ‘ನಾಳೈ ನಮದೇ’ಅನ್ನು ಭೋಜನ ಕೂಟದ ವೇಳೆ ಹಾಡಲಾಗಿತ್ತು ಎಂದು ಆ ಅನುಭವವನ್ನು ಹಂಚಿಕೊಂಡಿದ್ದಾರೆ.
ನಟ, ನಿರ್ದೇಶಕ, ನಿರ್ಮಾಪಕರಾಗಿದ್ದ ಎಂಜಿಆರ್ ಅವರು ಎಐಎಡಿಎಂಕೆ ಪಕ್ಷದ ಸ್ಥಾಪಕರೂ ಹೌದು. ಇವರು ತಮಿಳುನಾಡಿನ ಸಿಎಂ ಕೂಡ ಆಗಿದ್ದರು. ===ಆಜಾದ್ ಹಿಂದ್ ಫೌಜ್ ಯೋಧ,
ಭಾರತ ಮೂಲದ ಸಚಿವರ ಭೇಟಿನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಸ್ಥಾಪಿಸಿದ ಆಜಾದ್ ಹಿಂದ್ ಫೌಜ್‌ನ ಯೋಧರಾಗಿದ್ದ ಜೆಯರಾಜ್ ರಾಜಾ ರಾವ್ ಅವರನ್ನು ಪ್ರಧಾನಿ ಮೋದಿ ಅವರು ಮಲೇಷ್ಯಾದಲ್ಲಿ ಭೇಟಿಯಾದರು. ಇದರ ಫೋಟೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡು, ‘ರಾವ್ ಅವರ ಜೀವನ ಧೈರ್ಯ ಮತ್ತು ತ್ಯಾಗದಿಂದ ಕೂಡಿದೆ. ಅವರ ಅನುಭವಗಳು ಸ್ಫೂರ್ತಿದಾಯಕವಾಗಿದ್ದವು’ ಎಂದು ಬರೆದುಕೊಂಡಿದ್ದಾರೆ.
ಅತ್ತ ಮಲೇಷ್ಯಾದಲ್ಲಿರುವ ಭಾರತ ಮೂಲದ ಸಚಿವರು, ಸಂಸದರನ್ನು ಭೇಟಿಯಾದ ಮೋದಿ, ಉಭಯ ದೇಶಗಳ ಬಲವರ್ಧನೆಗೆ ಶ್ರಮಿಸುತ್ತಿರುವುದಕ್ಕಾಗಿ ಅವರನ್ನು ಅಭಿನಂದಿಸಿದರು.